ವಿದ್ಯುತ್ ಚಾಲಿತ ಬೈಕ್ ಬೆಂಕಿಗಾಹುತಿ

ಮನೆಯಲ್ಲಿ ನಿಲ್ಲಿಸಲಾಗಿದ್ದ ವಿದ್ಯುತ್ ಚಾಲಿತ ಬೈಕ್ ಇದಕ್ಕಿದಂತೆ ಹೊತ್ತಿ ಉರಿದು ಕರಕಲಾಗಿದ್ದು ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ಶಂಕರಪುರ ಅರ್ಶಿಕಟ್ಟೆ ನಿವಾಸಿ ಜೋಸೆಫ್ ಎಂಬವರಿಗೆ ಸೇರಿದ ದ್ವಿಚಕ್ರವಾಹನ ಇದಾಗಿದ್ದು, ಕಳೆದ ಒಂದು ವರ್ಷಗಳ ಹಿಂದೆಯಷ್ಟೇ ಕರೀದಿ ಮಾಡಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆಮಂದಿ ಮಲಗಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಗೂಡಲ್ಲಿದ್ದ ಹಕ್ಕಿಗಳು ಕೂಡಾ ಬೆಂಕಿಯ ತೀವೃತೆಗೆ ಸುಟ್ಟು ಕರಗಲಾದ ದೃಶ್ಯ ಮನ ಕಲುವಂತ್ತಾಗಿದೆ. ಮನೆಯ ಜಗಲಿ ಮೇಲಿದ್ದ ಕೆಲ ಸಲಕರಣೆಗಳಿಗೂ ಹಾನಿಯಾಗಿದೆ.ಪ್ರಕರಣ ಕಾಪು ಠಾಣೆಯಲ್ಲಿ ದಾಖಲಾಗಿದೆ.

Related Posts

Leave a Reply

Your email address will not be published.