ಏ.13: ಮೂರು ಕೃತಿಗಳ ಬಿಡುಗಡೆ; ಬಿಸು ಪರ್ಬದ ಮಾತುಕತೆ
ಮಂಗಳೂರು : ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜ್ ಮಂಗಳೂರು ಜಂಟಿ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಹಾಗೂ ಬಿಸು ಪರ್ಬದ ಮಾತುಕತೆ ಕಾರ್ಯಕ್ರಮ ಏ.13 ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ಮ್ಯಾಪ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಮುಂಬಯಿಯ ಲೇಖಕಿ ಶಾರದಾ ಎ. ಅಂಚನ್ ಅವರ “ನಂಬಿ ಸತ್ಯೋಲು” ಅನುವಾದಿತ ಕೃತಿ ಮತ್ತು “ರಕ್ತ ಶುದ್ಧಿ- ಆರೋಗ್ಯ ವೃದ್ಧಿ” ಎಂಬ ವೈದ್ಯಕೀಯ ಲೇಖನಗಳ ಕೃತಿ ಹಾಗೂ ಡಾ.ಪ್ರಭಾಕರ್ ನೀರ್ ಮಾರ್ಗ ಅವರ ‘ಓಲಗ’ ಕಾದಂಬರಿ ಬಿಡುಗಡೆಯಾಗಲಿದೆ.
ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಅವರು ಕೃತಿ ಬಿಡುಗಡೆ ಮಾಡುವರು. ತುಳು ಸಾಹಿತಿ ಕುಶಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಅವರು ಬಿಸು ಪರ್ಬದ ಬಗ್ಗೆ ಮಾತನಾಡುವರು. ಎಂ.ಆರ್.ಪಿ.ಎಲ್ ಸಂಸ್ಥೆಯ ನಿವೃತ್ತ ಮಹಾ ಪ್ರಬಂಧಕಿ ವೀಣಾ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸುವರು . ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮ್ಯಾಪ್ಸ್ ಕಾಲೇಜು ಅಧ್ಯಕ್ಷ ದಿನೇಶ್ ಅಳ್ವಾ , ತುಳು ಪರಿಷತ್ ಗೌರವ ಅಧ್ಯಕ್ಷ ಸ್ವರ್ಣ ಸುಂದರ್ , ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಭಾಗವಹಿಸುವರು
ಎಂದು ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಹಾಗೂ ಕೋಶಾಧಿಕಾರಿ ಶುಭೋದಯ ಆಳ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.