HomeFresh Newsಕಾರಿಂಜ: ಕಾಲು ಜಾರಿ ಕೆರೆಗೆ ಬಿದ್ದುವಿದ್ಯಾರ್ಥಿ ಸಾವು

ಕಾರಿಂಜ: ಕಾಲು ಜಾರಿ ಕೆರೆಗೆ ಬಿದ್ದುವಿದ್ಯಾರ್ಥಿ ಸಾವು

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ದೇವಸ್ಥಾನದ ಗದಾ ತೀರ್ಥ ಕೆರೆಯಲ್ಲಿ ಕಾಲು ತೊಳೆಯಲೆಂದು ಹೋದ ಕಾಲೇಜು ವಿದ್ಯಾರ್ಥಿಯೋರ್ವ ಜಾರಿ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ವಗ್ಗ ಕಾರಿಂಜ ಕ್ರಾಸ್ ಬಳಿಯ ಕಂಗಿತ್ತಿಲು ನಿವಾಸಿ ಶ್ರೀಧರ ಮೂಲ್ಯ ಅವರ ಪುತ್ರ, ಬಂಟ್ವಾಳ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚೇತನ್ ( 19) ಮೃತಪಟ್ಟವರು.
ಚೇತನ್ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ, ಇಂದು ಅದೇ ರೀತಿ ಸ್ನೇಹಿತ ಪ್ರಶ್ವಿತ್ ನ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದ. ಈ ವೇಳೆ ದೇವಾಲಯದ ‌ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯೊಳಗೆ ಚೇತನ್ ಬಿದ್ದಿದ್ದಾನೆ.
ಜತೆಯಲ್ಲಿ ಇದ್ದ ಪ್ರಶ್ವಿತ್ ಗೆ ಈಜು ತಿಳಿಯದ ಕಾರಣ ಆತ ಬೊಬ್ಬೆ ಹೊಡೆದು ಸ್ಥಳೀಯ ರನ್ನು ಕರೆದಿದ್ದಾನೆ. ಕೂಡಲೇ ಸ್ಥಳೀಯರು ಸೇರಿದ್ದು, ಶ್ರವಣ್ ಜೈನ್ ಹಾಗೂ ಉದಯ ಮಾಂಗಾಜೆ ಅವರು ಕೆರೆಗೆ ಹಾರಿ ಹುಡುಕಲು ಆರಂಭಿಸಿ, ಚೇತನ್ ನನ್ನು ಕೆರೆಯಿಂದ ಮೇಲಕ್ಕೆ ಎತ್ತಿ ಹಾಕಿದ್ದಾರೆ, ಆದರೆ ಅದಾಗಲೇ ಚೇತನ್ ಅವರು ಮೃತಪಟ್ಟಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments