ಖಾದಿ ಉತ್ಪನ್ನಗಳ ಬಳಕೆ, ರಫ್ತು ಯೋಜನೆ ಕೇಂದ್ರದ ಮುಂದಿದೆ : ಶೋಭಾ ಕರಂದ್ಲಾಜೆ
ಕಾರ್ಕಳ ರಾಷ್ಟ್ರಪಿತ ಗಾಂಧಿಯವರ ಸ್ವದೇಶಿ ಚಳುವಳಿ ಭಾಗವಾಗಿದ್ದ ಖಾದಿ ಉತ್ಪನ್ನಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಇತ್ತು ಖಾದಿ ಭಂಡಾರಗಳು ಕಾಂಗ್ರೆಸ್ ಆಡಳಿತದಲ್ಲಿ ಮುಚ್ಚಲ್ಪಟ್ಟವು ಪರಿಣಾಮವಾಗಿ 75 ಸ್ವಾತಂತ್ರ್ಯೋತ್ಸವ ಸಂದರ್ಭ ಖಾದಿ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಸಲಾಗದೆ ಪಾಲಿಸ್ಟರ್ ಬಟ್ಟೆ ಉಪಯೋಗಿಸಬೇಕಾಯಿತು ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದರು.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ಈಗ ನರೇಂದ್ರ ಮೋದಿ ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದ್ದು ರೈತ ಸಮುದಾಯ ನೇಕಾರ ಸಮುದಾಯ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆಯಲಿದೆ ಖಾದಿ ಉತ್ಪನ್ನಗಳ ಬಳಕೆ ಮಾತ್ರವಲ್ಲದೆ ರಫ್ತು ಯೋಜನೆಯು ಕೇಂದ್ರದ ಮುಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಕಾರ್ಖಳ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗಡೆ, ಮುಖಂಡರಾದ ಎಂ ಕೆ ವಿಜಯ್ ಕುಮಾರ್, ನವೀನ್ ನಾಯಕ್ ಬೋಳ ಜಯರಾಮ ಸಾಲಿಯನ್ ರವೀಂದ್ರ ಕುಮಾರ್ ರೇಷ್ಮಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.