ಸಿಂಗಲ್ ಲೇಔಟ್ ಸಮಸ್ಯೆ : ಸರಕಾರದ ನಿರ್ಲಕ್ಷ್ಯವೇ ವಿಳಂಬಕ್ಕೆ ಕಾರಣ

ಕಳೆದ ಹಲವು ವರ್ಷಗಳಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ಜಮೀನು ಖರೀದಿ, ಮಾರಾಟ ಮತ್ತು ಮನೆ ನಿರ್ಮಾಣ ಅಸಾದ್ಯವಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿದ್ದವು, ಸಮಸ್ಯೆಗೆ ಸ್ಪಂದಿಸಬೇಕಾದ ಸರಕಾರ ಮತ್ತು ಜನಪ್ರತಿನಿದಿಗಳು ನಿರ್ಲಕ್ಷವಹಿಸಿದ್ದ ಕಾರಣ ಪರಿಹಾರ ಸಾಧ್ಯವಾಗಲಿಲ್ಲ. ಅದರೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಜನರಲ್ಲಿ ಭರವಸೆಯನ್ನು ಮೂಡಿಸಿದೆ. ಈ ಆದೇಶವನ್ನೇ ಮಾದರಿಯಾಗಿ ಎಲ್ಲಾ ಅರ್ಜಿದಾರರಿಗೂ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಕಳದ ವಕೀಲರೊಬ್ಬರು ತಮ್ಮದೇ ಜಮೀನಿಗೆ ಸಂಬಂಧಿಸಿದಂತೆ ಖಾತಾ (ನಮೂನೆ-3) ಸಮಸ್ಯೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ (1921/2022) ದಾಖಲಿಸಿದ್ದು ಸದ್ರಿ ಪ್ರಕರಣದಲ್ಲಿ ದಿನಾಂಕ 3:09:2022 ರಂದು 8 ವಾರದ ಒಳಗಾಗಿ ಖಾತಾ ನೀಡಬೇಕೆಂದು ಆದೇಶವಾಗಿದ್ದೆ ಈ ಅದೇಶದಂತೆ ಖಾತಾ ನೀಡುವಂತೆ ಅವರು ಪುರಸಭೆಗೆ ಮನವಿಯನ್ನು ಸಲ್ಲಿಸಿದ್ದಾರೆ. ಇದು ಆತಂಕದಲ್ಲಿದ ಜನರಲ್ಲಿ ಭರವಸೆಯನ್ನು ಮೂಡಿಸಿದೆ ಎಂದರು.

ಈಗಾಗಲೆ ವಿದಾನಸಭೆಯ ಅಧಿವೇಶನದಲ್ಲಿ ಹೊಸ ಕಾನೂನು ರೂಪಿಸುವ ಅನುಮೋದನೆ ದೊರಕ್ಕಿದ್ದು ಅದು ಶೀಘ್ರ ಜಾರಿಯಾಗಿ ಶಾಶ್ವತ ಪರಿಹಾರ ಸಿಗುವುವಂತೆ ಪ್ರಯತ್ನಿಸಿ ಎಂದು ಆಗ್ರಹಿಸಿದ್ದಾರೆ. ಪುರಸಭಾ ಸದಸ್ಯ ಹರೀಶ್ ಕುಮಾರ್ ಉಪಸ್ಥಿತಿತರಿದ್ದರು.

Related Posts

Leave a Reply

Your email address will not be published.