ಮುಂಬೈ : 9ಹ್ಯಾಂಡ್ಸ್ ಫೌಂಡೇಶನ್ ಸಂಸ್ಥೆ ವಾರ್ಷಿಕ ಮಹಾಸಭೆ

9 ಹ್ಯಾಂಡ್ಸ್ ಫೌಂಡೇಶನ್ ಮುಂಬೈ ಸಂಸ್ಥೆಯ ವಾರ್ಷಿಕ ಮಹಾಸಭೆಯು ಆಂಧೇರಿಯ ಹೋಟೆಲ್ ತುಂಗಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ದಯಾನಂದ ಬಂಗೇರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯದರ್ಶಿ ದೇವರಾಜ ಅಮೀನ್ ಅವರು ಗತ ವರ್ಷದ ವಾರ್ಷಿಕ ಮಹಾಸಭೆಯ ಟಿಪ್ಪಣಿ ಓದಿದರು. ಜೊತೆ ಕೋಶಾಧಿಕಾರಿ ಶ್ರೀ ಸಂತೋಷ್ ಕರ್ಕೇರ ಇವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಶ್ರೀ ತುಕಾರಾಂ ಸಾಲ್ಯಾನ್ ಮತ್ತು ಶ್ರೀ ಹರೀಶ್ ಶ್ರೀಯಾನ್ ರವರು ತಮ್ಮ ಭಾಷಣದಲ್ಲಿ 9 ಹ್ಯಾಂಡ್ಸ್ ಪೌಂಡೇಶನ್,ಮುಂಬೈ ಇದರ ದ್ಯೇಯ ಮತ್ತು ಕೈಗೊಂಡ ಸಮಾಜಸೇವಾ ಕಾರ್ಯಗಳನ್ನು ಸವಿಸ್ತಾರವಾಗಿ ತಿಳಿಯಪಡಿಸಿದರು. ಈ ಸಂಸ್ಥೆ ಪ್ರಸಕ್ತ 170 ಸದಸ್ಯರನ್ನು ಹೊಂದಿದ್ದು ತಮ್ಮ ಕಾರ್ಯಕ್ಷಮತೆ ಮತ್ತು ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಒಂದು ಮಾದರಿ ಸಮಾಜ ಸೇವಾ ಸಂಘಟನೆಯಾಗಿ ಬೆಳೆದಿದೆ ಎಂದು ತಿಳಿಸಿದರು.

ಈ ಸಂಸ್ಥೆಯು 1 ನೇ ತರಗತಿಯಿಂದ 10 ನೇ ತರಗತಿ ವರೆಗಿನ ಮುಂಬಯಿ ಪರಿಸರದಲ್ಲಿರುವ ಬಡ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಭರಿಸುವ ಮೂಲಕ ಸಮಾಜಕ್ಕೆ ತನ್ನ ಕೈಲಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ರೂಪಾಯಿ 40,000 ತನಕದ ಶೈಕ್ಷಣಿಕ ಶುಲ್ಕವನ್ನು ಭರಿಸುತ್ತಿದ್ದೇವೆ. ಪ್ರಸಕ್ತ ವರ್ಷದಲ್ಲಿ ಸಹಾಯ ಹಸ್ತವನ್ನು ಯಾಚಿಸಿ ಬಂದ ಒಟ್ಟು 10 ವಿದ್ಯಾರ್ಥಿಗಳಿಗೆ ವಾರ್ಷಿಕ ಶೈಕ್ಷಣಿಕ ಶುಲ್ಕವನ್ನು ನಮ್ಮ ಸಂಸ್ಥೆಯ ವತಿಯಿಂದ ನೀಡಲಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯ ನೀಡಲು ಬಯಸುತ್ತಿದ್ದೇವೆ ಆದರೂ ಸಾಕಷ್ಟು ಹಣಕಾಸಿನ ಕೊರತೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಲು ಆಗಲಿಲ್ಲ ಎಂದು ತಿಳಿಸಲು ವಿಷಾದಪಡುತ್ತೇವೆ ಎಂದರು.

9 ಹ್ಯಾಂಡ್ಸ್ ಪೌಂಡೇಶನ್,ಮುಂಬೈ ಇದರ 170 ಸದಸ್ಯರು ಕನಿಷ್ಟ ಪಕ್ಷ ಒಂದು ಹೊಸ ಸದಸ್ಯರನ್ನು ನೊಂದಾಯಿಸುವ ಮೂಲಕ ಸಂಸ್ಥೆಯ ಸಮಾಜಿಕ ಸೇವಾ ಕಾರ್ಯವನ್ನು ಬೆಂಬಲಿಸಬೇಕೆಂದು ವಿನಂತಿಸಿದರು. ತನ್ಮೂಲಕ ಇನ್ನೂ ಹೆಚ್ಚಿನ ಬಡ ಕುಟುಂಬದವರಿಗೆ ಸಹಾಯವನ್ನು ಮಾಡಬಹುದು. ತಮ್ಮೆಲ್ಲರಲ್ಲಿ ಒಂದು ಮಹತ್ವದ ವಿಷಯ ಹೇಳಬಯಸುವೆನು ಏನೆಂದರೆ ನಮ್ಮ 9ಹ್ಯಾಂಡ್ಸ್ ಫೌಂಡೇಶನ್ ಸಂಸ್ಥೆಯು ಜನರಿಗೆ ಪರಿಚಯಿಸಿದ ಕಾನ್ಸೆಪ್ಟ್ ನ ಪ್ರಕಾರ ನಮ್ಮ ಸದಸ್ಯರಿಂದ ವಾರ್ಷಿಕ ಪಿಕ್ನಿಕ್ ಯಾ ಗೆಟ್-ಟುಗೆದರ್ ಗೋಸ್ಕರ ಸಂಗ್ರಹಣೆ ಮಾಡಿದ ರಾಶಿಯಿಂದ 50% ಹಣವನ್ನು ಬಡಮಕ್ಕಳಿಗೆ ಶೈಕ್ಷಣಿಕ ಸಹಾಯ ನೀಡಲು ಉಪಯೋಗಿಸುತ್ತಾ ಬರುತ್ತಾ ಇದ್ದೇವೆ ಹೊರತಾಗಿ ವಿದ್ಯಾರ್ಥಿಗಳಿಗೆ ಸಹಾಯ ನೀಡಲು ಸಂಗ್ರಹಣೆ ಮಾಡಿದ ಹಣದಿಂದ ಪಿಕ್ನಿಕ್/ಗೆಟ್-ಟುಗೆದರ್ ನ ಆಯೋಜನೆ ಮಾಡುತ್ತಿಲ್ಲ ಎಂಬ ನಿಜ ಸಂದೇಶವನ್ನು ಹೊರಗೆ ಜನರಿಗೆ ತಲಪಿಸಬೇಕು ಎಂದು ಸದಸ್ಯರಲ್ಲಿ ಶೀಯುತ ತುಕಾರಾಮ್ ಸಾಲ್ಯಾನರು ಕೇಳಿಕೊಂಡರು.

ಶ್ರೀ ಸುಧಾಕರ್ ಕರ್ಕೇರ ಮತ್ತು ಶ್ರೀ ಮುಕೇಶ್ ಬಂಗೇರ ಇವರ ಅತ್ಯುತ್ತಮ ಸೇವೆಯನ್ನು ಉಲ್ಲೇಖಿಸಲು ಹೆಮ್ಮೆ ಪಡುತ್ತೇವೆ. ಶ್ರೀ ಸುಧಾಕರ್ ಕರ್ಕೇರ ಇವರು ಹ್ರದಯ ವೈಶಾಲ್ಯ ಮೆರೆದ ವ್ಯಕ್ತಿತ್ವ. ಸಂಸ್ಥೆಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡುವುದರ ಜೊತೆಗೆ ಪ್ರತಿ ಕಾರ್ಯಕಾರಿ ಸಮಿತಿ ಸಭೆಗೆ ಉಚಿತವಾಗಿ ರುಚಿ,ಶುಚಿಯಾದ ಚಾ, ಕಾಫಿ, ತಿಂಡಿಗಳನ್ನು ಒದಗಿಸುತ್ತಿದ್ದರು. ಶ್ರೀ ಮುಕೇಶ್ ಬಂಗೇರರು ಈ ಸಂಸ್ಥೆಗೆ ಅತಿ ಹೆಚ್ಚು ಸಂಖ್ಯೆಯ ಸದಸ್ಯರನ್ನು ಸೇರ್ಪಡೆಗೊಳಿಸಿರುವರು ಮತ್ತು ವಾರ್ಷಿಕ ಮಹಾಸಭೆಯನ್ನು ಜರಗಿಸಲು ಬೇಕಾದ ಪೂರ್ವ ತಯಾರಿ ಮಾಡಿರುವರು. ಇವರಿಗೆ ಈ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಶ್ರೀಮತಿ ಸುಚೇತ ಮೆಂಡನ್ ರಾಣೆ ಯವರು ರೂಪಾಯಿ 25,000 ದೇಣಿಗೆಯನ್ನು ನೀಡಿರುವರು. ಆ ಮೂಲಕ ಒಂದು ವಿದ್ಯಾರ್ಥಿಯ ವಾರ್ಷಿಕ ಶುಲ್ಕವನ್ನು ಭರಿಸುವ ಮೂಲಕ ಹ್ರದಯ ವೈಶಾಲ್ಯತೆಯನ್ನು ಮೆರೆದಿರುವರು. ಅಲ್ಲದೆ ಶ್ರೀ ಮಹೇಶ್ ಬಂಗೇರರು ವರ್ಷಂಪ್ರತಿ ತಮ್ಮ ಸದಸ್ಯತ್ವ ಶುಲ್ಕದ ಜೊತೆಗೆ ಹೆಚ್ಚುವರಿ ದೇಣಿಗೆಯನ್ನು ನೀಡುತ್ತಾ ಬಂದಿರುವರು. ಇವರಿಬ್ಬರಿಗೂ ನಮ್ಮ ಸಂಸ್ಥೆಯ ವತಿಯಿಂದ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಶ್ರೀ ದೇವರಾಜ ಅಮೀನ್ ರವರು ಧನ್ಯವಾದ ಸಮರ್ಪಣೆ ನೀಡಿದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಅರ್ಕೆಷ್ಟ್ರ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು.

Related Posts

Leave a Reply

Your email address will not be published.