ಮುಖ್ಯಮಂತ್ರಿ ಆಗಮನ ಹಿನ್ನಲೆ ಕಾಪುವಿನಲ್ಲಿ ವ್ಯಾಪಾರಿಗಳಿಗೆ ಸಮಸ್ಯೆ ಇಲ್ಲ : ಎಸ್. ಅಂಗಾರ

ಕಾಪುವಿನಲ್ಲಿ ನಡೆಯಲಿರುವ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಬರುವವರಿದ್ದು, ಕಾರ್ಯಕ್ರಮ ಕಾಪುವಿನಲ್ಲಿ ನಡೆಯುತ್ತಿದ್ದರೂ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗದು ಎಂಬುದಾಗಿ ಉಸ್ತುವಾರಿ ಸಚಿವ ಅಂಗಾರ ಹೇಳಿದರು.
ಅವರು ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಇದು ಪಕ್ಷದ ಕಾರ್ಯಕ್ರಮ ಆಗಿದ್ದು ಪೇಟೆ ಒಳಭಾಗದಲ್ಲಿ ನಡೆಯುತ್ತಿದ್ದರೂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಯಾವುದೇ ಅಡ್ಡಿಯಾಗದು, ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ಜನ ಸೇರುವ ನಿರೀಕ್ಷೆ ಇದ್ದ ಕಾರಣ ವಾಹನ ಸಂಚಾರಕ್ಕೆ ಕೊಂಚ ತೊಡಕ್ಕಾಗ ಬಹುದೆಂದರು. ಕಡಲು ಕೊರೆತ ಸಮಸ್ಯೆ ಜೀವಂತವಿರುವ ಬಗ್ಗೆ ಉತ್ತರಿಸಿದ ಅವರು ಕಡಲಿಗೆ ಕಲ್ಲು ಹಾಕುವ ಪ್ರಕ್ರಿಯೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದು, ಆ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಡೆಸಲುದ್ಧೇಶಿಸಿದಂತೆ ಶಾಶ್ವತ ಬ್ರೇಕ್ ವಾಟರ್ ನಿರ್ಮಿಸಿ ಕಡಲು ಕೊರೆತ ತಡೆಯುವ ಕಾಮಗಾರಿ ನಡೆಸಲಾಗುವುದೆಂದರು.

ಮೀನುಗಾರರಿಗೆ ನೀಡುತ್ತಿದ್ದ ಸೀಮೆ ಎಣ್ಣೆ ಸಮಸ್ಯೆ ನೀಗಿಸಲು ಸೀಮೆ ಎಣ್ಣೆ ಯಂತ್ರದ ಬದಲು ಪೆಟ್ರೋಲ್ ಯಂತ್ರ ಬಳಕೆ ಮಾಡಲು ಪೆÇ್ರೀತ್ಸಾಹ ಮಾಡಲಾಗುವುದು, ಈ ಯಂತ್ರಕ್ಕೆ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿ ಮೌಲ್ಯವಿದ್ದು , ಈ ಯಂತ್ರ ಪಡೆದುಕೊಳ್ಳುವ ಮೀನುಗಾರರಿಗೆ ಅದೆಷ್ಟು ಸಬ್ಸಿಡಿ ನೀಡ ಬೇಕೆಂಬುದು ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧರಿಸಲಾಗುವುದೆಂದರು.
ಈ ಸಂದರ್ಭ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಶಾಸಕ ಲಾಲಾಜಿ, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ರಾವ್, ಶಿಲ್ಪಾ ಸುವರ್ಣ, ಗಂಗಾಧರ್ ಸುವರ್ಣ ಉಪಸ್ಥಿತರಿದ್ದರು.

Related Posts

Leave a Reply

Your email address will not be published.