ಪಾವೂರಿನಲ್ಲಿ ಕಾಂಕ್ರೀಟ್ ರಸ್ತೆಯ ಉದ್ಘಾಟನೆ

ಉಳ್ಳಾಲ: ಮಂಗಳೂರು ನಗರದಲ್ಲಿರುವಂತಹ ಸೌಕರ್ಯಗಳನ್ನು ಕ್ಷೇತ್ರದ ಅತ್ಯಂತ ಹಿಂದುಳಿದ ಪ್ರದೇಶಕ್ಕೆ ಮಾಡಿಕೊಡುವುದೇ ನನ್ನ ಕಲ್ಪನೆ , ಅದರಂತೆ ಪಾವೂರು ಗ್ರಾಮದ ಚಿತ್ರಣ ಮುಂದಿನ 10 ವರ್ಷಗಳಲ್ಲೇ ಬದಲಾವಣೆಯಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಪಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಡಾರ್ ಸೈಟ್ ಹಾಗೂ ಒಂದನೇ ವಾರ್ಡಿಗೆ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಪೋಡಾರು ಭಾಗದಲ್ಲಿ ಹಿಂದೆ ಸಾಮಾಜಿಕವಾಗಿ ಹುಸೈನ್ ಪಾವೂರು ಎಂಬವರು ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದವರು. ಅಂದಿನ ಕಾಲಕ್ಕೆ ಅನುಗುಣವಾಗಿ ಜನರಿಗೆ ಬಹಳಷ್ಟು ಶ್ರಮಿಸಿದವರು. ಇದೀಗ ಗ್ರಾಮದ ತಾ.ಪಂ ಮಾಜಿ ಅಧ್ಯಕ್ಷರು, ಹಿಂದಿನ ಹಾಗೂ ಈಗಿನ ಗ್ರಾ.ಪಂ ಸದಸ್ಯರು, ಯುವಕರು ಒಗ್ಗಟ್ಟಾಗಿ ಬೇಡಿಕೆಯನ್ನು ಇಟ್ಟ ಪರಿಣಾಮವಾಗಿ ಒಂದು ವರ್ಷದ ಹಿಂದೆ ಅನುದಾನ ಮಂಜೂರುಗೊಳಿಸಲಾಗಿತ್ತು ಎಂದರು.

ಈ ಸಂದರ್ಭ ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಪಾವೂರು ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್, ಸದಸ್ಯರಾದ ರಿಯಾಝ್ ಅಹಮ್ಮದ್, ರವಿಕಲಾ, ಪಾವೂರು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಗಾ.ಪಂ ಮಾಜಿ ಸದಸ್ಯ ವಿವೇಕ್ ರೈ, ಮಹಮ್ಮದ್ ಮಾಜಿ ಅಧ್ಯಕ್ಷ ಫಿರೋಝ್ ಮಲಾರ್, ಅನಿಲ್ ಲೋಬೊ, ಗುತ್ತಿಗೆದಾರ ಅಬ್ದುಲ್ ಜಲೀಲ್ ಮೋಂಟುಗೋಳಿ, ಆಶಾ ಕಾರ್ಯಕರ್ತೆ ಹೇಮಾ, ರಾಜೀವಿ, ಸಾಮಾಜಿಕ ಕಾರ್ಯಕರ್ತ ಇಲ್ಯಾಸ್ ಪೋಡಾರ್ ಸೈಟ್, ರಮೇಶ್, ಲತೀಫ್, ಶಮೀಮ, ಕಿರಣ್ ಪೂಜಾರಿ, ಐವನ್ ಡಿಸೋಜ ,ಜಗದೀಶ್ ಉಪಸ್ಥಿತರಿದ್ದರು.

add - tandoor .

Related Posts

Leave a Reply

Your email address will not be published.