ಸಮಸ್ಯೆಗಳ ಕೂಪವಾಗಿ ಮಾರ್ಪಟ್ಟ ವಿಟ್ಲ ಪಟ್ಟಣ

ವಿಟ್ಲ: ಸಮಸ್ಯೆಗಳ ಕೂಪವಾಗಿ ವಿಟ್ಲ ಪಟ್ಟಣ ಮಾರ್ಪಾಡಾಗಿದೆ. ಸಮಸ್ಯೆಯಿಂದ ಕಂಗಾಲಾದ ಜನಅವರ ಕಷ್ಟಗಳನ್ನು ನಮ್ಮಲ್ಲಿ ಹೇಳುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಅದ್ದರಿಂದ ಬಿಜೆಪಿಯ ಕಾರ್ಯವೈಖರಿ ಏನೆಂಬುದು ಜನರಿಗೆ ಮನದಟ್ಟಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

ಅವರು ವಿಟ್ಲ ಪಟ್ಟಣ ಪಂಚಾಯತ್ ನ ದುರವಸ್ಥೆಯ ವಿರುದ್ಧ ವಿಟ್ಲ – ಉಪ್ಪಿನಗಂಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಪಂಚಾಯತ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಅಧಿಕಾರಿಗಳು ಸರಿ ಇದ್ದರೆ ಪಟ್ಟಣ ಪಂಚಾಯತ್ ದಾರಿ ತಪ್ಪಲು ಸಾಧ್ಯವಿಲ್ಲ. ಬಡವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಸಹಕಾರ ನೀಡಿ ಕೆಲಸ ನಿರ್ವಹಿಸಿ. ವರ್ಕ್ ಆರ್ಡರ್ ಕೊಡದೆ ಯಾರೇ ಕೆಲಸ ಮಾಡಿಸಿದ್ದರು ಅದು ತಪುö್ಪ. ರಾಜಕೀಯದವರ ಮಾತು ಕೇಳಿ ಅಧಿಕಾರಿಗಳು ಕೆಡಬೇಡಿ. ನೀವು ಬಡವರಿಗೆ ಮಾಡಿದ ಸಹಾಯಗಳು ನಿಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ, ಕೆಪಿಸಿಸಿ ಕಾರ್ಯದರ್ಶಿ ಸದಸ್ಯ ಎಂ.ಎಸ್. ಮಹಮ್ಮದ್ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಮಾತನಾಡಿದರು.

ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳಿಧರ್ ರೈ ಮಠಂತಬೆಟ್ಟು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಬ್ಲಾಕ್ ವಕ್ತಾರರಾದ ರಮಾನಾಥ್ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯರಾದ ವಿ ಕೆ ಎಂ ಅಶ್ರಫ್, ಪಟ್ಟಣ ಪಂಚಾಯತ್ ಸದಸ್ಯರಾದ ಲತಾ ವೇಣಿ, ಪದ್ಮಿನಿ, ಡಿಕಯ್ಯ ಸುರುಳಿಮುಲೆ, ಪಕ್ಷದ ಪ್ರಮುಖರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಮೊದಲಾದವರು ಉಪಸ್ಥಿತರಿದ್ದರು.
