HomeFresh Newsಶ್ರೀ ರಾಮಕೃಷ್ಣ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಂದ ಬ್ಲೂಮಿಂಗ್ ಬಡ್ಸ್ ಇವೆಂಟ್

ಶ್ರೀ ರಾಮಕೃಷ್ಣ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಂದ ಬ್ಲೂಮಿಂಗ್ ಬಡ್ಸ್ ಇವೆಂಟ್

ಬಂಟರ ಯಾನೆ ನಾಡವರ ಮಾತ್ರ ಸಂಘದ ವತಿಯಿಂದ ನಡೆಸಲ್ಪಡುತ್ತಿರುವ ಶ್ರೀ ರಾಮಕೃಷ್ಣ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಂದ ಬ್ಲೂಮಿಂಗ್ ಬಡ್ಸ್ ಇವೆಂಟ್ ಶನಿವಾರ 31.01.2026ರಂದು ಶಾಲೆಯ ಅಂಗಳದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಅಮೇಜಿಂಗ್ ಕಿಡ್ಸ್ ಸಂಸ್ಥೆಯ ಪ್ರಿನ್ಸಿಪಾಲರಾದ ಮಿಸ್ಸಸ್ ಶಾಯಿನ್ ನೆರವೇರಿಸಿದರು ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಶ್ರೀ. ಗೌರವ ಪಿ. ಭಂಡಾರಿ ಆಗಮಿಸಿದರು.

ಶ್ರೀ ರಾಮಕೃಷ್ಣ ಸಂಸ್ಥೆಯ ಸಂಚಾಲಕರಾದ ಡಾ. ಬಿ ಸಂಜೀವ್ ರೈ, ಕಿಂಡರ್ ಗಾರ್ಟನ್ ಇದರ ಅಡ್ಮಿನಿಸ್ಟ್ರೇಟ‌ರ್ ಶ್ರೀಮತಿ ಕೀರ್ತಿರೈ, ಶಾಲಾ ೦೦ ಪ್ರಾಂಶುಪಾಲರಾದ ಡಾ.ಪ್ರಸಿಲ್ಲ ಡಿಸೋಜಾ, ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳು ತಯಾರಿಸಿದ ಕಲಿಕಾ ಉಪಕರಣಗಳು, ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಹೆತ್ತವರು ವಸ್ತು ಪ್ರದರ್ಶನಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಬಳಿಕ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ನವೀಕರಿಸಲಾದ ಗಿಗಿಲ್ ಗಾರ್ಡನ್ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು. ಈ ನವೀಕರಣ ದಿಂದ ಮಕ್ಕಳಿಗೆ ಆಕರ್ಷಕ ಆಟದ ವಾತಾವರಣ ನಿರ್ಮಾಣವಾಗಿದೆ. ಈ ಸೇವಾ ಕಾರ್ಯಕ್ಕಾಗಿ 1999ರ ಹಳೆ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಲಾಯಿತು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments