“ವೃದ್ಧಿ” ಸಾವಯವ ಉತ್ಪನ್ನಗಳ ಮಳಿಗೆ ಉದ್ಘಾಟನೆ

ಮಂಗಳೂರಿನ ಕೊಟ್ಟಾರದ ಮಾಲೇಮಾರ್ ದೇರೆಬೈಲ್ ಮರಿಯನ್ ಸೊಲೇನ್‍ನ ಕಟ್ಟಡದಲ್ಲಿ ನೈಸರ್ಗಿಕ ಮರದ ಗಾಣದ ಎಣ್ಣೆ ತಯಾರಿ, ಮಾರಾಟ ಮತ್ತು ಸಾವಯವ ಉತ್ಪನ್ನಗಳ ಮಳಿಗೆ ವೃದ್ಧಿ ಇದರ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು.

ಶಾಸಕ, ವಿಧಾನಸಭೆ ವಿಪಕ್ಷ ಉಪನಾಯಕರಾದ ಯು.ಟಿ.ಖಾದರ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪಾರಂಪರಿಕ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ಹಿಂದೆ ಸರಿದ ಕಾರಣ ಸಮಾಜದಲ್ಲಿ ಅನಾರೋಗ್ಯ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ದುಡ್ಡಿದ್ದ ಮಾತ್ರಕ್ಕೆ ಆರೋಗ್ಯ ಕೊಂಡುಕೊಳ್ಳಲಾಗದು. ದುಡ್ಡಿದ್ದ ಮಾತ್ರಕ್ಕೆ ಆರೋಗ್ಯ ಕೊಂಡುಕೊಳ್ಳಲಾಗುವುದು, ನಮ್ಮ ಜೀವನ ಶೈಲಿ ಮತ್ತೆ ಬದಲಾಗಬೇಕಿದೆ. ಅವರಸ, ಮಾನಸಿಕವಾಗಿ ಒತ್ತಡ ಮುಕ್ತ ಜೀವನ ನಡೆಸಲು ಆಹಾರ ಪದ್ಧತಿಯಲ್ಲಿನ ಬದಲಾವಣೆಯೂ ಕಾರಣವಾಗಬಲ್ಲದು ಎಂದು ಅವರು ಹೇಳಿದರು. ಇನ್ನೂ ಶಾಸಕ ಡಾ|ಭರತ್ ಶೆಟ್ಟಿ ಮಾತನಾಡಿ, ಪ್ರಾಮಾಣಿಕತೆ, ಬದ್ಧತೆ, ಗ್ರಾಹಕ ಸ್ನೇಹಿ ಸೇವೆಯಿಂದ ಯಾವುದೇ ಉದ್ಯಮ ಯಶಸ್ವಿಯಾಗಬಲ್ಲದು ಎಂದು ಅವರು ಹೇಳಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಮನೋಜ್ ಕುಮಾರ್, ರಂಜಿನಿ ಕೋಟ್ಯಾನ್, ಮಾಜಿ ಮೇಯರ್ ಶಶಿಧರ್ ಹೆಗ್ಗಡೆ, ಪ್ರಮುಖರಾದ ರೆಹಮತುಲ್ಲಾ, ನ್ಯಾಯವಾದಿ ಅಬ್ದುಲ್ ರೆಹಮಾನ್, ಇಬ್ರಾಹಿಂ, ಸಂಸ್ಥೆಯ ಮಾಲಕಿ ಮಸೂದಾ ಮೊೈದಿನ್, ಜಯಶ್ರೀ ರಾಮಚಂದ್ರ , ಪಾಲುದಾರರಾದ ರಾಜೇಶ್.ಆರ್, ಬಿ.ಎಸ್. ಮೊೈದಿನ್, ಮತ್ತಿತರರು ಉಪಸ್ಥಿತರಿದ್ದರು. ಮರದ ಗಾಣದಿಂದ ಕೊಬ್ಬರಿಯನ್ನು ಬಳಸಿ ಶುದ್ಧ ತೆಂಗಿನೆಣ್ಣೆ ಇಲ್ಲಿ ಲಭ್ಯವಿದೆ.
