HomeFresh Newsಕೆವಿಜಿ ಆಯುರ್ವೇದ ಕಾಲೇಜ್ ವಾರ್ಷಿಕೋತ್ಸವ ಸಮಾರಂಭ

ಕೆವಿಜಿ ಆಯುರ್ವೇದ ಕಾಲೇಜ್ ವಾರ್ಷಿಕೋತ್ಸವ ಸಮಾರಂಭ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ನವೆಂಬರ್ 23 ರಂದು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ, ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ, ವೈದ್ಯ ಹಾಗೂ ರೋಗಿಯ ನಡುವಿನ ಸಂಬಂಧ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಕುರಿತು ವಿವರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಮೆಂಬರ್ ಹಾಗೂ ರಾಜಶೇಖರಯ್ಯ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲಾರದ ಡಾ. ಸಂಕನಗೌಡ ಪಾಟೀಲ್ ರವರು ಆಯುರ್ವೇದ ವೈದ್ಯಕೀಯ ಪದವಿ ಪಡೆದ ನಂತರ ಇರುವಂತಹ ಅವಕಾಶಗಳ ಕುರಿತು ಸಲಹೆಗಳನ್ನು ನೀಡಿದರು.

ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಇದರ ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಉಪಸ್ಥಿತರಿದ್ದು ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧ ಹಾಗೂ ಕಾಲೇಜಿನ ಸವಿ ನೆನಪುಗಳು ಎಂದೆಂದಿಗೂ ಶಾಶ್ವತವೆಂದು ಉದಾಹರಣೆ ಸಹಿತವಾಗಿ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ಎ ಒ ಎಲ್ ಇ (ರಿ.) ಇದರ ಕಾರ್ಯದರ್ಶಿಗಳಾದ ಶ್ರೀ ಹೇಮನಾಥ ಕೆ ವಿ, ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಶ್ರೀ. ಟಿ ಎಂ ಶಹೀದ್, ಕಾಲೇಜಿನ ಅಕಾಡೆಮಿಕ್ ಕೊ ಆರ್ಡಿನೇಟರ್ ಡಾ. ಕವಿತಾ ಬಿ ಎಂ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಹಾಗೂ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆ.ವಿ.ಜಿ. ಫಾರ್ಮಾ ಹಾಗೂ ರಿಸರ್ಚ್ ಸೆಂಟರಿನ ಹೊಸ ಔಷಧ ಉತ್ಪನ್ನಗಳಾದ ತಾಂಬೂಲಸವ, ತಕ್ರಾರಿಷ್ಠ ಹಾಗೂ ಆಜಮೋದ ಅರ್ಕವನ್ನು ಅತಿಥಿಗಳು ಬಿಡುಗಡೆ ಗೊಳಿಸಿ ಕೆ ವಿ ಜಿ ಫಾರ್ಮಾ ಮತ್ತು ರಿಸರ್ಚ್ ಸೆಂಟರಿನ ಸಿ ಇ ಒ ಆದ ಡಾ. ಪುರುಷೋತ್ತಮ್ ಕೆ ಜಿ ಇವರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಹಾಗೂ ಕಾಲೇಜಿನ ತ್ರೈಮಾಸಿಕ ಪತ್ರಿಕೆ ಆಯುರ್ ನ್ಯೂಸ್ ನು
ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನಲ್ಲಿ 25 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮಿ ಪಿ ಬಿ ಹಾಗೂ ಕಾಲೇಜಿನ ಕಚೇರಿ ಸಿಬ್ಬಂಧಿಯಾದ ಶ್ರೀ. ಧರ್ಮಪಾಲ ಎಸ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಕಾಲೇಜಿನ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಹರ್ಷವರ್ಧನ ಕೆ ಇವರಿಗೆ ಎಸ್ ಡಿ ಎಂ ಉಡುಪಿ ಇದರ ಇನ್ಸ್ಟಿಟ್ಯೂಷನಲ್ ಎಥಿಕಲ್ ಕಮಿಟಿಯ ಕ್ಲಿನಿಷಿಯನ್ (ಬಾಹ್ಯ ಸದಸ್ಯರು) ಹಾಗೂ ಯೆನೆಪೋಯ ಡೀಮ್ಡ್ ಯೂನಿವರ್ಸಿಟಿಯ ಡಾಕ್ಟರಲ್ (Ph.D) ಕಮಿಟಿಯ ಬಾಹ್ಯ ಸದಸ್ಯರಾಗಿ ಆಯ್ಕೆಯಾದ ಸಾಧನೆಗೆ ಸನ್ಮಾನಿಸಲಾಯಿತು. ಹಾಗೂ ಕಾಲೇಜಿನ 1999 ನೇ ಸಾಲಿನ ಹಳೇ ವಿದ್ಯಾರ್ಥಿಯಾದ ಡಾ. ಸುಭಾಷ್ ರೈ ಅವರ ಸಾಧನೆಯನ್ನು ಗುರುತಿಸಿ ಕೂಡಾ ಗೌರವಿಸಲಾಯಿತು. ಜೊತೆಗೆ ಶೈಕ್ಷಣಿಕ ಹಾಗೂ ಸಹ ಪಠ್ಯದಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ ಸ್ವಾಗತಿಸಿ, ಕು. ನೀಲಿಮಾ ಹಾಗು ಬಳಗ ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಶ್ರವಣ್ ಹಾಗು ಬಳಗ ಆಶಯ ಗೀತೆಯನ್ನು ಹಾಡಿ, ವಿದ್ಯಾರ್ಥಿ ಸಂಘದ ನಾಯಕಿಯಾದ ಡಾ. ನೀಲಾ ಎಂ ವಂದಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು. ಚಿಂತನ ಎನ್ ಎಸ್ ಹಾಗು ಕು. ಅಮೂಲ್ಯ ಸಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments