Home Posts tagged #death

ಮುಂಬೈ : ಹೋಟೆಲ್ ಸಾಮ್ರಾಜ್ಯದ ಅಧಿಪತಿ ಸುರೇಶ್ ಎಸ್. ಪೂಜಾರಿ ಪಡುಕೋಣೆ ವಿಧಿವಶ

ಎಳೆಯ ವಯಸ್ಸಿನಲ್ಲೇ ಹುಟ್ಟೂರನ್ನು ತೊರೆದು ಕುಟುಂಬದ ಪಾಲನೆಗೆ ದೂರದ ಮಾಯಾ ನಗರಿ ಮುಂಬಯಿಗೆ ತೆರಳಿ ತಮ್ಮ ಸ್ವ ಸಾಮರ್ಥ್ಯದಿಂದ ಸುಖ ಸಾಗರ ಗ್ರೂಪ್ ಆಪ್ ಹೋಟೆಲಿನ ಸಾಮ್ರಾಜ್ಯವನ್ನು ಕಟ್ಟಿ ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಸಮರ್ಪಿಸಿದ ಕೊಡುಗೈ ದಾನಿ ಸುರೇಶ್ ಎಸ್ ಪೂಜಾರಿಯವರು ಇಂದು ಸಂಜೆ 7:40 ಕ್ಕೆ ಮುಂಬೈಯಲ್ಲಿ ತಮ್ಮ

ಉಪ್ಪಿನಂಗಡಿ: ಮನೆಯ ತೋಟದ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಅವಿವಾಹಿತ ಯುವಕನೊಬ್ಬ ತನ್ನ ಮನೆಯ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆಯಿದೆ . ಇಲ್ಲಿನ ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ (28) ಆತ್ಮಹತ್ಯೆಗೈದ ಯುವಕ. ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿತ್ತು ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ

ಉಡುಪಿ: ಎರಡು ಬೈಕುಗಳ ನಡುವೆ ಅಪಘಾತ – ಓರ್ವ ಬೈಕ್ ಸವಾರ ಸಾವು

ಉಡುಪಿ: ಎರಡು ಬೈಕುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಅಜ್ಜರಕಾಡಿ ಅಗ್ನಿ ಶಾಮಕ ದಳ ಠಾಣೆಯ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ. ಮೃತರನ್ನು ಸ್ಥಳೀಯರಾದ ಸ್ಯಾಮುಯೆಲ್ ಸದಾನಂದ ಕರ್ಕಡ(59) ಎಂದು ಗುರುತಿಸಲಾಗಿದೆ. ಅತಿ ವೇಗದಿಂದ ಬಂದ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸದಾನಂದ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.ಅಪಘಾತದಿಂದ

ಮಂಜೇಶ್ವರ: ಕುಂಬಳೆಯಲ್ಲಿ ಕಾರು ಅಪಘಾತ : ಮಹಿಳೆ ಸಾವು

ಮಂಜೇಶ್ವರ: ಸೋಮವಾರ ಮಧ್ಯಾಹ್ನ ಮಟ್ಟಂ ಶಿರಿಯಾ ಬಳಿ ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡ 62 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಕಾಇಾಂಗಾಡಿನ ಕೊವ್ವಲ್ಪಳ್ಳಿ ಮಾನ್ಯಾಟ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಿವಾಸಿ ನಫೀಸ (62) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾಂ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿಧನ

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಹರಿಪ್ರಸಾದ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಹೊಸಂಗಡಿ ನಿವಾಸಿಯಾಗಿರುವ ಅವರು ಹರಿಯಣ್ಣ ಎಂದೇ ಚಿರಪರಿಚಿತರಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ. ಪೆರಾಡಿ ಸೊಸೈಟಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ

ಮಂಗಳೂರು: ಹೊಸಬೆಟ್ಟುವಿನಲ್ಲಿ ಸಮುದ್ರಕ್ಕಿಳಿದ ನಾಲ್ವರಲ್ಲಿ ಓರ್ವನ ರಕ್ಷಣೆ: ಮೂವರ ಮೃತದೇಹ ಪತ್ತೆ

ಮಂಗಳೂರಿಗೆ ಪ್ರವಾಸಕ್ಕೆಂದು ಬಂದ ನಾಲ್ವರು ಸ್ನೇಹಿತರು ಹೊಸಬೆಟ್ಟು ಬೀಚ್‌ನ ನಿರ್ಮಾಣ ಹಂತದ ಜೆಟ್ಟಿ ಬಳಿ ಸಮುದ್ರದಲ್ಲಿ ಈಜಲೆಂದು ಇಳಿದಿದ್ದು ಈ ಸಂದರ್ಭದಲ್ಲಿ ನಾಲ್ವರಲ್ಲಿ ಮೂವರು ಸಮುದ್ರ ಪಾಲಾಗಿದ್ದು, ಓರ್ವ ಯುವಕನನ್ನು ರಕ್ಷಣೆ ಮಾಡಲಾಗಿದೆ. ಕಾಲೇಜು ಮುಗಿಸಿ ಮಂಗಳೂರಿಗೆ ಪ್ರವಾಸಕ್ಕೆಂದು ನಾಲ್ವರು ಸ್ನೇಹಿತರು ಜೊತೆಗೆ ಬಂದಿದ್ದರು. ಇದೇ ವೇಳೆ ಹೊಸಬೆಟ್ಟು ಬಳಿ ನಿರ್ಮಾಣ ಹಂತದ ಜೆಟ್ಟಿ ಬಳಿ ಸಮುದ್ರಕ್ಕಿಳಿದ ನಾಲ್ವರು ನೀರಿನ ಸೆಳೆತಕ್ಕೆ ಸಮುದ್ರಪಾಲಾದರು.

ಪುತ್ತೂರು ತಾಲೂಕು ಕಚೇರಿಯ ಚುನಾವಣಾ ಶಾಖೆಯ ಸಿಬ್ಬಂದಿ ಕನಕರಾಜು ನಿಧನ

ಪುತ್ತೂರು: ಪುತ್ತೂರಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕನಕರಾಜ್ ಸೆ.25ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು. ರಾತ್ರಿ 11 ಗಂಟೆ ವೇಳೆಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಿವಾಸಿಯಾಗಿರುವ ಕನಕರಾಜ್ ಈ ಹಿಂದೆ ಬೆಟ್ಟಂಪಾಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ

ಮೂಡುಬಿದಿರೆ : ಅರ್ಚಕ ಅಡಿಗಳ್ ಶ್ರೀನಿವಾಸ ಭಟ್ ನಿಧನ

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಹಿರಿಯ ಅರ್ಚಕ, ಶತಾಯುಷಿ ಅಡಿಗಳ್ ಶ್ರೀನಿವಾಸ ಭಟ್ (100) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 65 ವರ್ಷಗಳ ಕಾಲ ಸೋಮನಾಥೇಶ್ವರ ಹಾಗೂ ಸಪರಿವಾರ ದೇವರುಗಳ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

ಮೂಡುಬಿದಿರೆ: ಕಾಲು ಜಾರಿ ಬಿದ್ದು ಸಮಾಜ ಮಂದಿರ ಸಭಾದ ವಾಚ್ ಮೆನ್ ಸಾವು

ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಉಳಿದುಕೊಳ್ಳಲು ಸಮಾಜ ಮಂದಿರದ ವತಿಯಿಂದಲೇ

ಬೈಂದೂರು: ಬಾವಿಗೆ ಕಾಲು ಜಾರಿ ಬಿದ್ದು ಸಾವು

ಬೈಂದೂರು:ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಪೋಸ್ಟ್ ನಿವಾಸಿ ಕೃಷಿಕ ಮಂಜುನಾಥ ಶೇಟ್ (85) ಎಂಬುವವರು ತೆಂಗಿನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಂತಹ ಸಮಯದಲ್ಲಿ ಬಾವಿ ಬದಿಯಲ್ಲಿ ಬಿದ್ದಿರುವ ತೆಂಗಿನಕಾಯಿಯನ್ನು ಹೆಕ್ಕುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮಂಜುನಾಥ ಶೇಟ್ ಅವರು ಬೆಳಗಿನ ಸಮಯದಲ್ಲಿ ತೆಂಗಿನ ತೋಟಕ್ಕೆ ಹೋಗಿ ತೋಟದಲ್ಲಿ ಬಿದ್ದಿರುವ ಕಾಯಿಯನ್ನು ಹೆಕ್ಕುವ ಅಭ್ಯಾಸವನ್ನು