ಕಾಪು: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ – ಕೋಶ ಉಡುಪಿ ಮತ್ತು ಪುರಸಭಾ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್ ಗಳ ವತಿಯಿಂದ ಕಾಪು ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಲಾದ “ಲೋಕ ಕಲ್ಯಾಣ ಮೇಳ” ಕಾರ್ಯಕ್ರಮವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ಪ್ರಧಾನ ಮಂತ್ರಿ ಕಿರು ಆಹಾರ ತಯಾರಿ ಘಕಟ ಸ್ಥಾಪಿಸುವ ಸಲುವಾಗಿ ಪರಿಶಿಷ್ಟ ಜಾತಿಯ 11 ಫಲಾನುಭವಿಗಳಿಗೆ 40,000 ದಂತೆ ಒಟ್ಟು 4 ಲಕ್ಷ 40 ಸಾವಿರ ರೂಪಾಯಿ ಮೊತ್ತದ ಸಾಲ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಮೋಹಿನಿ ಶೆಟ್ಟಿ, ಕಾಪು ಪುರಸಭೆಯ ಕಂದಾಯ ಅಧಿಕಾರಿಗಳಾದ ಶಶಿಕಲಾ ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.


