ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಅಡಿಯಲ್ಲಿ : ದ.ಕ. ಜಿಲ್ಲೆಯ 26 ಶಾಲೆಗಳಿಗೆ ಅನುದಾನದ ಚೆಕ್ ವಿತರಣೆ
ಸ್ವಾಮಿ ವಿವೇಕಾನಂದರು ಕಂಡಂತಹ ಭಾರತವನ್ನು ನಾವು ನಿರ್ಮಾಣ ಮಾಡುವತ್ತ ಮುಂದುವರಿಯಬೇಕಿದ್ದು ಪ್ರಸ್ತುತದ ದಿನಗಳು ದೇಶಾದ್ಯಂತ ಅದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಬೋಳಿಯಾರಿನ ಅಮರ್ ದೀಪ್ ಸಭಾಂಗಣದಲ್ಲಿ ಬೆಂಗಳೂರಿನ ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಸಾಂಸ್ಥಿಕ ಸಾಮಾಜಿಕ ಜವಬ್ದಾರಿ(ಸಮೈಸೂರುಆರ್ ) ಯಡಿಯಲ್ಲಿ ಚೇರ್ ಮೆನ್ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಆದೇಶದ ಮೇರೆಗೆ ಜಿಲ್ಲೆಯ 26 ಶಾಲೆಗಳಿಗೆ ತಲಾ ಒಂದು ಲಕ್ಷ ರೂ. ಅನುದಾನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಸಂಸ್ಥೆಯ ಚೇರ್ ಮೆನ್ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಆಡಳಿತ ನಿರ್ದೇಶಕಿ ಶೀಲಾ ಜೆ, ಪ್ರಧಾನ ವ್ಯವಸ್ಥಾಪಕ ಪ್ರಕಾಶ್ ಸಿ. ಆರ್. , ಕಾರ್ಯದರ್ಶಿ ಕವಿತಾ, ಅಸಿಸ್ಟೆಂಟ್ ಮೆನೇಜರ್ ಮಂಜುನಾಥ್ ಎಸ್., ಡೆಪ್ಯುಟಿ ಮೆನೇಜರ್ ರಘುಪತಿ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಕರ್ಕೇರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಸಜಿಪ ಪಡು ಪಂಚಾಯಿತಿ ಅಧ್ಯಕ್ಷ ವಿಠಲ ಅಮೀನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್ ಪಾದಲ್ಪಾಡಿ ಉಪಸ್ಥಿತರಿದ್ದರು.