ಮಲ್ಪೆ-ಮೊಳಕಾಲ್ಮೂರು ಹೆದ್ದಾರಿ ಅವ್ಯವಸ್ಥೆಯಿಂದಾಗಿ ಕೃತಕ ನೆರೆ

ಮಲ್ಪೆಯಿಂದ ಉಡುಪಿ ಮೂಲಕ ಮಣಿಪಾಲದ ಮೇಲೆ ಹಾದು ಹೋಗುವ ಮೊಳಕಾಲ್ಮೂರು ಬಳಿ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಆತ್ರಾಡಿ ಬಳಿ ಕೃತಕ ನೆರೆ ಉಂಟಾಗಿದೆ.
ಹೆದ್ದಾರಿ ಅವ್ಯವಸ್ಥೆಯಿಂದಾಗಿ ಉಂಟಾದ ನೆರೆಯಿಂದ ಆತ್ರಾಡಿಯ ಭಾಗದ ನಿವಾಸಿಗಳ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಿಸದ ಹಿನ್ನೆಲೆಯಲ್ಲಿ ಮನೆಗೆ ಚರಂಡಿ ನೀರು ನುಗ್ಗಿದ ಪರಿಣಾಮ ಆತ್ರಾಡಿಯ ಸ್ಥಳೀಯ ಜನರು ಆಕ್ರೋಶಗೊಂಡಿದ್ದು, ಸಂಬಂಧಪಟ್ಟವರು ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
