Home Posts tagged #udupi rain

ಉಡುಪಿ : ಎಡೆಬಿಡದ ಮಳೆಗೆ ಮತ್ತೊಂದು ಸಾವು

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ ಮತ್ತೊಂದು ಸಾವು ಸಂಭವಿಸಿದೆ. ತಡರಾತ್ರಿ ಉಡುಪಿ ಜಿಲ್ಲೆಯ ಬೆಳ್ಮಣ್ ಪೇಟೆ ಬಳಿಯಲ್ಲಿ, ಬೈಕ್ ಸವಾರನ‌ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಪಿಲಾರುಕಾನದ ಪ್ರವೀಣ್ ಆಚಾರ್ಯ (30), ಕಾರ್ಕಳದಿಂದ ತನ್ನ ಮನೆಯತ್ತ ತೆರಳುತ್ತಿದ್ದಾಗ ಏಕಾಏಕಿ ಉರುಳಿಬಿದ್ದ ಬೃಹತ್‌

ಜುಲೈ 7ರಂದು ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಜುಲೈ 7 ರಂದು ಮಳೆ ಮುಂದುವರೆಯುವ ಮುನ್ಸೂಚನೆಯಿದ್ದು, ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಕೂಡ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ,

ರಕ್ಷಣೆಗೆ ಎಲ್ಲಾ ತಂಡಗಳು ಸನ್ನದ್ಧವಾಗಿವೆ : ಉಡುಪಿ ಡಿಸಿ ಎಂ. ಕೂರ್ಮ ರಾವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದು ಅರೆಂಜ್ ಅಲೆರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಸ್ಥಳಾಂತರ ನಡೆಸಲು ಅಗ್ನಿಶಾಮಕ ದಳ ಸಿದ್ದವಾಗಿದೆ. ಉಡುಪಿಯ 9 ಪ್ರದೇಶಗಳಿಗೆ ಈಗಾಗಲೇ ಬೋಟ್ ವ್ಯವಸ್ಥೆ ಮಾಡಲಾಗಿದೆ. ಉಡುಪಿ ನಗರದ ತಗ್ಗು ಪ್ರದೇಶಗಳಲ್ಲಿ ಕೂಡಾ ನೀರು ಮನೆಗೆ ನುಗ್ಗಿದೆ. ಆದ್ದರಿಂದ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದೇವೆ. ರಕ್ಷಣೆಗೆ ಎಲ್ಲಾ ತಂಡಗಳು ಸನ್ನದ್ಧವಾಗಿವೆ. ಉಸ್ತುವಾರಿ ಸಚಿವರು ಕೂಡಾ ನಿರಂತರವಾಗಿ ಸಂಪರ್ಕದಲ್ಲಿದ್ದು

ಉಡುಪಿಯಲ್ಲಿ ಬಿಡುವಿಲ್ಲದ ಮುಂಗಾರಿನ ಜೋರು

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 121 ಮಿಲಿಮೀಟರ್ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಸರಾಸರಿ ಮಳೆಯ ವಿವರದ ಪ್ರಕಾರ ಉಡುಪಿ ನಗರದಲ್ಲಿ 131 ಮಿ.ಮೀ., ಬ್ರಹ್ಮಾವರದಲ್ಲಿ 106, ಬೈಂದೂರಿನಲ್ಲಿ 130, ಕುಂದಾಪುರದಲ್ಲಿ 85, ಕಾರ್ಕಳದಲ್ಲಿ 151, ಕಾಪುವಿನಲ್ಲಿ 126 ಮತ್ತು ಹೆಬ್ರಿಯಲ್ಲಿ 116 ಮಿ.ಮೀ. ಮಳೆ ದಾಖಲಾಗಿದೆ.

ಭಾರೀ ಮಳೆಯಿಂದ ಉಡುಪಿಯ ತಗ್ಗು ಪ್ರದೇಶಗಳು ಜಲಾವೃತ

ಉಡುಪಿ: ಎರಡು ‌ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಉಡುಪಿಯ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಡುಪಿ ನಗರದ ಮೂಡನಿಡುಂಬೂರು ಬ್ರಹ್ಮ ಬೈದರ್ಕಳ ಗರಡಿ ಮತ್ತು ಬನ್ನಂಜೆ ಶಿರಿಬೀಡು ವಾರ್ಡ್‌ನಲ್ಲಿವ ಗರಡಿಗೆ ವಿಪರೀತ ಮಳೆಯಿಂದಾಗಿ ನೀರು ನುಗ್ಗಿದೆ. ಸಾಕಷ್ಟು ಮನೆಗಳ ಅಂಗಳದವರೆಗೂ ನೀರು ನುಗ್ಗಿದ್ದು, ಹರಿಯುವ ನೀರಿನಲ್ಲಿ ಕಾರ್ಮಿಕರು ನಡೆದಾಡಲು ಹರಸಾಹಸ ಪಡುವಂತಾಗಿದೆ. ಇಂದ್ರಾಣಿ ನದಿ ಇದೀಗ ನೆರೆಯಿಂದ

ಮಳೆಯ ಅಬ್ಬರಕ್ಕೆ ನಿಜಾಮುದ್ದೀನ್- ತಿರುವನಂತಪುರ ಎಕ್ಸ್ ಪ್ರೆಸ್ ಉಡುಪಿಯಲ್ಲಿ ಸ್ಥಗಿತ

ಉಡುಪಿ: ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನೆನ್ನೆ ತಡರಾತ್ರಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಮಟಪಾಡಿ ಗ್ರಾಮದಲ್ಲಿ ರೈಲ್ವೆ ಟ್ರ್ಯಾಕ್ ನ ವಿದ್ಯುತ್ ಕಂಬದ ಮೇಲೆ ಮರ ಕುಸಿದು ಬಿದ್ದಿತ್ತು. ದೆಹಲಿ – ಕೇರಳ ನಡುವೆ ಓಡುವ ನಿಜಾಮುದ್ದೀನ್- ತಿರುವನಂತಪುರ ಎಕ್ಸ್ ಪ್ರೆಸ್ ರೈಲು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪರಿಣಾಮ, ಉಡುಪಿ ಜಿಲ್ಲೆಯ ರೈಲ್ವೆ ಟ್ರ್ಯಾಕ್ ನಲ್ಲಿ ಓಡುವ ಎಲ್ಲಾ ರೈಲುಗಳ ಸಂಚಾರ ಎರಡು ಗಂಟೆ ಸ್ಥಗಿತಗೊಂಡವು. ರೈಲ್ವೆ

ಉಡುಪಿಯಲ್ಲಿ ಮುಂಗಾರು ಬಿರುಸು : ಬೈಂದೂರಿನಲ್ಲಿ ಹೆಚ್ಚು ಸುರಿದ ಮಳೆ

ಉಡುಪಿ : ಉಡುಪಿಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಿಂದ ಸುರಿದ ಮುಂಗಾರು ಮಳೆ ವರದಿಯ ಪ್ರಕಾರ ಬೈಂದೂರು, ಕಾಪು ಮತ್ತು ಹೆಬ್ರಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರಾಸರಿ 71 ಮಿಲಿ ಮೀಟರ್ ಮಳೆಯಾಗಿದ್ದು, ಕುಂದಾಪುರದಲ್ಲಿ 64, ಕಾರ್ಕಳದಲ್ಲಿ 60, ಹೆಬ್ರಿಯಲ್ಲಿ 70, ಬೈಂದೂರಿನಲ್ಲಿ 91, ಬ್ರಹ್ಮಾವರದಲ್ಲಿ 61 ಮತ್ತು

ಉಡುಪಿ-ಮಣಿಪಾಲ ರಸ್ತೆ ಬದಿಯಲ್ಲಿ ಗುಡ್ಡ ಕುಸಿತ

ಉಡುಪಿ : ಉಡುಪಿ ಜಿಲ್ಲೆಗೆ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಯೆಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ನಿನ್ನೆಯಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಡುಪಿ-ಮಣಿಪಾಲ ರಸ್ತೆ ಬದಿಯಲ್ಲಿ ಗುಡ್ಡ ಜರಿತ ಉಂಟಾಗಿದೆ. ನಿರಂತರ ಮಳೆಯಿಂದ ಮಣ್ಣು ಹದಗೊಂಡು ಮಣಿಪಾಲದ ಏರು ಪ್ರದೇಶದಲ್ಲಿ ಗುಡ್ಡಗಳು ರಸ್ತೆಯ ಮೇಲೆ ಕುಸಿಯುತ್ತಿವೆ. ಜರಿಯುತ್ತಿರುವ ಗುಡ್ಡದ ಮೇಲೆ ಕಟ್ಟಡಗಳಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಸಣ್ಣ