HomeFresh News"ಮಂಗಳೂರು ಕ್ಯಾನ್-ವಾಕ್ 2026 – ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜಾಗೃತಿ ನಡಿಗೆ"

“ಮಂಗಳೂರು ಕ್ಯಾನ್-ವಾಕ್ 2026 – ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜಾಗೃತಿ ನಡಿಗೆ”

ಮಂಗಳೂರು, ಫೆಬ್ರವರಿ 1, 2026 : – ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆ.ಎಂ.ಸಿ), ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು KMC ಅತ್ತಾವರ ಆಂಕೊಲಾಜಿ ಸೆಂಟರ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ , ಮಂಗಳೂರು ರನ್ನರ್ಸ್ ಕ್ಲಬ್, ಡೆಕಾಥ್ಲಾನ್ ಮತ್ತು ಭಾರತ್ ಮಾಲ್ ಸಹಯೋಗದೊಂದಿದೆ
ಆಯೋಜಿಸಲಾಗಿದ್ದ “ಮಂಗಳೂರು ಕ್ಯಾನ್-ವಾಕ್ 2026” ನಡಿಗೆಯು ಇಂದು ಬೆಳಿಗ್ಗೆ 6:00 ಗಂಟೆಗೆ ಯಶಸ್ವಿಯಾಗಿ ನಡೆಯಿತು.
ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳೂರಿನ ಡಾ. ಟಿ.ಎಂ.ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಿಂದ ಈ ನಡಿಗೆಯು ಆರಂಭವಾಗಿ – ಮಂಗಳೂರು ಲೈಟ್ ಹೌಸ್ ನ kmc ಮೆಡಿಕಲ್ ಕಾಲೇಜು ವರೆಗೆ ನಡೆಯಿತು.

ಜಿಲ್ಲಾ ಆರೋಗ್ಯ ಅಧಿಕಾರಿ (DHO) ಡಾ. ಎಚ್.ಆರ್. ತಿಮ್ಮಯ್ಯ ಮತ್ತು ಮಾಹೆ ಮಣಿಪಾಲ್ ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸೆಲರ್ ಡಾ. ದಿಲೀಪ್ ಜಿ. ನಾಯಕ್ ಅವರು ಜಂಟಿಯಾಗಿ ಹಸಿರು ನಿಶಾನೆ (Flag off) ತೋರುವ ಮೂಲಕ ನಡಿಗೆಗೆ ಚಾಲನೆ ನೀಡಿದರು.
ವೇದಿಕೆ ಯಲ್ಲಿ ಡಾ. ಶಿವಪ್ರಕಾಶ್ – ಜಿಲ್ಲಾ ವೈದ್ಯಾಧಿಕಾರಿ (DMO)
ಡಾ. ದಿಲೀಪ್ ಜಿ. ನಾಯಕ್ – ಪ್ರೊ ವೈಸ್ ಚಾನ್ಸೆಲರ್, ಮಾಹೆ ಮಣಿಪಾಲ್ ಮಂಗಳೂರು ಕ್ಯಾಂಪಸ್
ಡಾ. ಸ್ವಾತಿ ಆಚಾರ್ಯ – ಸಂಯೋಜಕರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ
ಡಾ. ಚಕ್ರಪಾಣಿ ಎಂ – ವೈದ್ಯಕೀಯ ಅಧೀಕ್ಷಕರು, ಅತ್ತಾವರ ಕೆ.ಎಂ.ಸಿ ಆಸ್ಪತ್ರೆ
ಡಾ. ಎಂ.ಎಸ್. ಅತಿಯಮಾನ್ – ಮುಖ್ಯಸ್ಥರು, ವಿಕಿರಣ ಆಂಕೊಲಾಜಿ ವಿಭಾಗ
ಡಾ. ಶಿವಾನಂದ ಪ್ರಭು – ವೈದ್ಯಕೀಯ ಅಧೀಕ್ಷಕರು, ಡಿ.ಎಸ್.ಎಂ.ಎಚ್ ಕಟೀಲು
ಡಾ. ಸಂತೋಷ್ ರೈ ಮಂಗಳೂರು ರನ್ನರ್ಸ್ ಕ್ಲಬ್
ಡಾ. ಅಶ್ಫಾಕ್ ಮೊಹಮ್ಮದ್ . ಅಸೋಸಿಯೇಟ್ ಡೀನ್, ಪ್ರೊಫೆಸರ್ ಸರ್ಜರಿ ವಿಭಾಗ
ಡಾ. ಅಭಿಷೇಕ್ ಕೃಷ್. ಅಸ್ಸಿಸ್ಟೆಂಟ್ ಪ್ರೊಫೆಸರ್ .ರೇಡಿಯೇಶನ್ ಆಂಕಾಲಜಿ ವಿಭಾಗ.

ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ರೋಗನಿರ್ಣಯದ ಮಹತ್ವವನ್ನು ಸಾರುವ ಈ ನಡಿಗೆಯಲ್ಲಿ ಸುಮಾರು 1200 ಕ್ಕೂ ಹೆಚ್ಹು ಸಾರ್ವಜನಿಕರು, ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments