ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ನಗರದ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆಯಿತು.









ದೀಪಾಲಂಕಾರಗೊಂಡ ಚರ್ಚ್‌ಗಳು ಮನೆಮನೆಯಲ್ಲಿ ನಕ್ಷತ್ರಗಳು, ಪ್ರಾರ್ಥನಾ ಮಂದಿರ, ಮನೆ ಮುಂಭಾಗ ಆಕರ್ಷಣೀಯ ಗೋದಲಿಗಳು, ಕ್ರಿಸ್ಮಸ್ ಟ್ರಿ, ಅದರಲ್ಲೂ ಕತ್ತಲಾಗುತ್ತಿದ್ದಂತೆ ಝಗಮಗಿಸುವ ಬೆಳಕಿನ ಮಧ್ಯೆ ಕ್ರಿಸ್ಮಸ್ ವೈಭವವನ್ನು ಕಣ್ತುಂಬಿಕೊಳ್ಳುವುದೇ ಎಲ್ಲಿಲ್ಲದ ಸಂಭ್ರಮ.
ಶನಿವಾರ ಸಂಜೆ 7ರಿಂದ ನಗರದ ಮಿಲಾಗ್ರಿಸ್, ರೊಸಾರಿಯೊ, ಉರ್ವ, ಕೋಡಿಕಲ್, ಬಿಜೈ, ಬೊಂದೇಲ್, ಜಪ್ಪು ಸೇರಿದಂತೆ ನಾನಾ ಹಬ್ಬದ ಸಂಭ್ರಮದಲ್ಲಿ ಬಲಿಪೂಜೆ ನಡೆಯಿತು. ಇಂದು ಬೆಳಿಗ್ಗೆಯೂ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಹಬ್ಬದ ಪೂಜೆ ನಡೆಯಿತು.