ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳ, ಗುರು ಬೆಳದಿಂಗಳು ಫೌಂಡೇಶನ್, ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಲೇಡಿಹಿಲ್ ಸಮೀಪದ ನಾರಾಯಣಗುರು ವೃತ್ತದಿಂದ ಸ್ವಚ್ಛತಾ ಕಾರ್ಯಕ್ರಮ ಆರಂಭಗೊಂಡು ಕುದ್ರೋಳಿ ದೇವಸ್ಥಾನದವರೆಗೆ ಯುವಕರು ಸ್ವಚ್ಛಗೊಳಿಸಿದರು.