ಮಂಗಳೂರು : ಹೆಸರಾಂತ ಗಣಪತಿ ವಿಗ್ರಹಗಳ ತಯಾರಕ ಹಾಲಾಡಿ ದಾಮೋದರ ಶೆಣೈ ನಿಧನ
ಮಂಗಳೂರು :- ಆವೇ ಮಣ್ಣಿನ ಹೆಸರಾಂತ ಗಣಪತಿ ವಿಗ್ರಹಗಳ ತಯಾರಕರಾದ ಹಾಲಾಡಿ ದಾಮೋದರ ಶೆಣೈ (ಗಣಪತಿ ಮಾಮು) ಇವರು ಇಂದು ಬೆಳಿಗ್ಗೆ ಗುಂಡು ರಾವ್ ಲೇನಿನ ಸ್ವಗ್ರಹದಲ್ಲಿ ನಿಧನರಾದರು ಇವರಿಗೆ 85ವರ್ಷ ಇವರು ಕಳೆದ 70ವರ್ಷಗಳಿಂದ ಆವೇ ಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರಿಸಿ ಡಾಕ್ಟರ್ ರಾಜ್ ಕುಮಾರ್ ಪ್ರಶಸ್ತಿ, ವೀರೇಂದ್ರ ಹೆಗ್ಡೆ ಅವರಿಂದ ಪ್ರಶಸ್ತಿ, ಪೇಜಾವರ ಸ್ವಾಮೀಜಿ ಇವರಿಂದ ಪ್ರಶಸ್ತಿ ಹಾಗೂ ಸನ್ಮಾನಗಳಿಸಿರುವರು.
ಉತ್ತಮ ಕಲಾವಿದರಾದ ಇವರು ಸುಮಾರು 70 ವರ್ಷಗಳಿಂದ ಗಣಪತಿ ದೇವರ ವಿಗ್ರಹ ರಚಿಸುವಲ್ಲಿ ನಿಸ್ಸಿಮರು. ಇವರು ಬಂಧು ಮಿತ್ರರು, ಶಿಷ್ಯಂದಿರು, ಹಾಗೂ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.