ರಾಷ್ಟೀಯ ಬಿಲ್ಲವ- ಈಡಿಗ ನಾಮಧಾರಿ ಧೀವರ ಮಹಾಮಂಡಳಿ ವತಿಯಿಂದ ಆನ್ ಲೈನ್ ಭಾಷಣ ಸ್ಪರ್ಧೆ

ರಾಷ್ಟೀಯ ಬಿಲ್ಲವ- ಈಡಿಗ ನಾಮಧಾರಿ ಧೀವರ ಮಹಾಮಂಡಳಿ (ರಿ)ಉಡುಪಿ ಜಿಲ್ಲೆ ಇದರ ವತಿಯಿಂದ ನಾರಾಯಣ  ಗುರುಗಳ ಸಂದೇಶ ನಿನ್ನೆ – ಇಂದು – ನಾಳೆ ಎಂಬ ವಿಷಯದ ಬಗ್ಗೆ ಹತ್ತನೇ ತರಗತಿಯಿಂದ ಪದವಿ ವರೆಗಿನ ವಿದ್ಯಾರ್ಥಿಗಳಿಗಾಗಿ ಅನ್ ಲೈನ್ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ವಿಜೇತರಿಗೆ – ಪ್ರಥಮ  :  5,000 & ಪ್ರಶಸ್ತಿ ಪತ್ರ, ದ್ವೀತಿಯ : 3,000 & ಪ್ರಶಸ್ತಿ ಪತ್ರ, ತೃತೀಯ : 2,000 & ಪ್ರಶಸ್ತಿ ಪತ್ರ ನೀಡಲಾಗುವುದು.

ಭಾಷಣ ಸ್ಪರ್ಧೆಗೆ ನಿಯಮಗಳು:

ರೀಲ್ಸ್ ಫಾರ್ಮೆಟ್ ನಲ್ಲಿ (1.1) ವಿಡಿಯೋ ಭಾಷಣ ರೆಕಾರ್ಡ್ ಮಾಡಬೇಕು.

ವಿಡಿಯೋ ಮತ್ತು  ಧ್ವನಿ ಗುಣಮಟ್ಟದ್ದಾಗಿರಬೇಕು.

ಸರ್ವ  ಧರ್ಮದ ವಿದ್ಯಾರ್ಥಿಗಳು ಭಾಗವಹಿಸಬಹುದು.

ಪ್ರಸಕ್ತ ಸಾಲಿನ ವಿದ್ಯಾಭ್ಯಾಸದ ಪ್ರಮಾಣ ಪತ್ರ ,ಪಾಸ್ ಪೋರ್ಟ್ ಸೈಜಿನ ಪೋಟೊ ವಿಡಿಯೋದೊಂದಿಗೆ  ಕಳುಹಿಸಿಕೊಡಬೇಕು.

ವಿಡಿಯೋವನ್ನು ಡಾಕ್ಯೂಮೆಂಟ್ ರೂಪದಲ್ಲಿ  ವಾಟ್ಸಾಪ್ ಗೆ ಕಳುಹಿಸಿಕೊಡಿ‌

ಅಗಸ್ಟ್ 20 ರಿಂದ 25 ರ ಒಳಗೆ ವಿಡಿಯೋಗಳನ್ನು ವಾಟ್ಸಾಪ್ ನಂಬರ್ 0987654321ಕಳುಹಿಸಿಕೊಡಬೇಕು‌.
ಈ ಸಂಭಂದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು 9379946336/9880058665
ಈ ಭಾಷಣ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ರಾಷ್ಟೀಯ ಬಿಲ್ಲವ- ಈಡಿಗ ನಾಮಧಾರಿ ಧೀವರ ಮಹಾಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮನವಿ ಮಾಡಿಕೊಂಡಿರುತ್ತಾರೆ.

add - Anchan ayurvedic

Related Posts

Leave a Reply

Your email address will not be published.