ನವಮಂಗಳೂರು ಬಂದರಿಗೆ ಆಗಮಿಸಿದ `ಎಂವಿ ಹಾಂಗ್ ಎಎನ್’ ಹಡಗು

ನವ ಮಂಗಳೂರು ಬಂದರಿನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕಂಟೇನರ್ ಟರ್ಮಿನಲ್‍ಗೆ ಕಂಟೇನರ್‍ಗಳನ್ನು ಹೊತ್ತ ಹಡಗು `ಎಂವಿ ಹಾಂಗ್ ಎಎನ್’ ಶುಕ್ರವಾರ ಆಗಮಿಸಿದೆ.
ಚಿತ್ತಗಾಂಗ್ – ಕೊಲಂಬೊ – ಮಂಗಳೂರು – ನವಾ ಶೇವಾ – ಮುಂದ್ರಾ ಮಾರ್ಗವಾಗಿ ಪೂರ್ವಕ್ಕೆ ಜೆಬೆಲ್ ಅಲಿ- ಖಲೀಫಾ ಬಂದರು ಮಾರ್ಗದಲ್ಲಿ ಈ ಹಡಗು ಸಂಚರಿಸುತ್ತಿದೆ. ಭಾರತದ ರಫ್ತುದಾರ ಜೆಬೆಲ್ ಅಲಿ, ಅಬುಧಾಬಿ ಗೆ ನೇರ ಸೇವೆಯನ್ನು ಒದಗಿಸಲಿದೆ. ಅಮೆರಿಕ ಯುರೋಪ್, ಆಗ್ನೇಯ ಏಶ್ಯ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಸಾಮಗ್ರಿ ತಲುಪಿಸಲು ಸಹಕಾರಿಯಾಗಲಿದೆ. ಎನ್‍ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಅವರು ಮೊದಲ ನೇರ ಮೇನ್‍ಲೈನ್ ಸೇವೆಯನ್ನು ಉದ್ಘಾಟಿಸಿದರು. ಹೆಡ್ ಇಂಡಿಯಾ ಆಪರೇಷನ್ಸ್ ಸಿಎಂಎ-ಸಿಜಿಎಂ ಕ್ಯಾಪ್ಟನ್ ಸಾಗರ್ ಡಾಂಗೆ, ಉಪಾಧ್ಯಕ್ಷ ರಾಮನಾಥನ್ ಉಪಸ್ಥಿತರಿದ್ದರು.
