ಮಂಗಳೂರು:ಥ್ರೋ ಬಾಲ್ ಟೂರ್ನಮೆಂಟ್ ನಲ್ಲಿ ಎಸ್‌ಜೆಇಸಿ ಚಾಂಪಿಯನ್

ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಮಹಿಳಾ ಥ್ರೋಬಾಲ್ ತಂಡವು ಮಾರ್ಚ್ 25,
2025 ರಂದು ನಿಟ್ಟೆ ಮೀನಾಕ್ಷಿ ಹೆಗ್ಡೆ ಏನ್.ಎಂ.ಎ.ಎಂ.ಐ.ಟಿ ನಿಟ್ಟೆಯಲ್ಲಿ ನಡೆದ ಸ್ಮಾರಕ ಟ್ರೋಫಿ ಥ್ರೋಬಾಲ್
ಪಂದ್ಯಾವಳಿಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಶಾ ವಿ ರೊಡ್ರಿಗಸ್ ಮತ್ತು ಸಹಾಯಕ ಪಿಇಡಿ ಸುಧೀರ್ ಎಂ
ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪ್ರಥಮ ವರ್ಷದ ಎಐಎಂಎಲ್ ನ ನವಿತಾ ಶೆಟ್ಟಿ ಅತ್ಯುತ್ತಮ ಥ್ರೋವರ್ ಪ್ರಶಸ್ತಿಯನ್ನು ಪಡೆದರು ಮತ್ತು ದ್ವಿತೀಯ ವರ್ಷದ ಸಿ.ಎಸ್ ನ ನಿಶಾ ವಾಲ್ರಿ ಅರಾನ್ಹಾ ಪಂದ್ಯಾವಳಿಯ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದರು. ಈ ಅಗಾಧ ಸಾಧನೆಗಾಗಿ ಎಸ್‌ಜೆಇಸಿ ಆಡಳಿತ
ಮಂಡಳಿಯು ಇಡೀ ತಂಡ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಅಭಿನಂದಿಸುತ್ತದೆ.