ಮಂಗಳೂರು ಲೇಡೀಸ್ ಬ್ಯೂಟಿ ಅಸೋಸಿಯೇಶನ್ ನ ತಿಂಗಳ ಸಭೆ
ಮಂಗಳೂರು ಲೇಡೀಸ್ ಬ್ಯೂಟಿ ಅಸೋಸಿಯೇಶನ್ ನ ತಿಂಗಳ ಸಭೆಯು ಉರ್ವಸ್ಟೋರ್ ತುಳುಭವನದಲ್ಲಿ ನಡೆಯಿತು .
ಈ ಸಭೆಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಅಧ್ಯಕ್ಷರಾದಂತಹ ಕತ್ತಲ್ ಸಾರ್ ಎಪ್ಪತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದ ಕುರಿತು ಹಿತನುಡಿಗಳನ್ನಾಡಿದರು . ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದಂತಹ ಬಬಿತಾ ಯು ಶೆಟ್ಟಿ , ಕಾರ್ಯದರ್ಶಿ ಫರ್ಜಾನಾ , ಉಪಾಧ್ಯಕ್ಷರು ಸುಲತಾ ಸುರತ್ಕಲ್, ಕೋಶಾಧಿಕಾರಿ ಝೀನಾ ಉಪಸ್ಥಿತರಿದ್ದರು . 18ರಿಂದ 40 ವರ್ಷ ಪ್ರಾಯದ ಒಳಗಿನ ಸದಸ್ಯರಿಗೆ ಅನುಕೂಲವಾಗುವಂತೆ ಕಾರ್ಮಿಕ ಇಲಾಖೆ ದಕ್ಷಿಣ ಕನ್ನಡ ಮಂಗಳೂರು ಇವರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆಯ ಬೃಹತ್ ನೋಂದಾವಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಅನೇಕ ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ