ಮಂಗಳೂರು : ಶೈಕ್ಷಣಿಕ ಮತ್ತು ಸಂಶೋಧನಾ ಕುರಿತ ಕಾರ್ಯಕ್ರಮಗಳ ಬಗ್ಗೆ ಒಪ್ಪಂದ

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್ ಲಾನ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

father mullar

ಈ ಒಪ್ಪಂದವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಆಯೋಜಿಸುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಲು ಸಹಕಾರಿಯಾಗಿದೆ. ಜ್ಞಾನ, ಅನುಭವಗಳು ಮತ್ತು ಶೈಕ್ಷಣಿಕ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳುವ ಮೂಲಕ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರವನ್ನು ವಿನಿಮಯ ಮಾಡಕೊಳ್ಳಲು ಸಹಕಾರಿಯಾಗಲಿವೆ.

dr m v shetty

Related Posts

Leave a Reply

Your email address will not be published.