ಮಂಗಳೂರು: ಜುಲೈ 7ರಂದು ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ ಎಂಬ ಕಾನೂನು ಮಾಹಿತಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ

ಮಂಗಳೂರು: ಖ್ಯಾತ ವಕೀಲರು ಮತ್ತು ನೋಟರಿ ಆಗಿರುವ ಮೂಡಬಿದಿರೆ ಚೌಟರ ಅರಮನೆಯ ಡಾ.ಅಕ್ಷತಾ ಆದರ್ಶ್ ಅವರು ಬರೆದ ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ ಎಂಬ ಕಾನೂನು ಮಾಹಿತಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಜುಲೈ 7ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

ಜುಲೈ 7ರಂದು ಬೆಳಿಗ್ಗೆ 10.15ಕ್ಕೆ ಸರಿಯಾಗಿ ನಡೆಯಲಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆಯನ್ನು ವಹಿಸಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ವಿ ರಾಘವೇಂದ್ರ ಮುಖ್ಯ ಅತಿಥಿಗಳಾಗಿ
ಭಾಗವಹಿಸಲಿದ್ದಾರೆ.

ಹಲವು ರೀತಿಯ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರ ನೂರಾರು ಪ್ರಶ್ನೆಗಳಿಗೆ ಕಾನೂನಿನ ಉತ್ತರಗಳು ಈ ಪುಸ್ತಕದಲ್ಲಿರುವುದು ವಿಶೇಷವಾಗಿದೆ.

govt women polytechnic


Related Posts

Leave a Reply

Your email address will not be published.