ಮಂಗಳೂರು : ಸೌಹಾರ್ದ ದೀಪಾವಳಿ ಮತ್ತು ಕತ್ತಲ ಹಾಡು ಕಾರ್ಯಕ್ರಮ

ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಘಟಕ ಹಾಗೂ ಪಕ್ಕಲಡ್ಕ ಯುವಕ ಮಂಡಲ (ರಿ) ಇದರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸೌಹಾರ್ದ ದೀಪಾವಳಿ ಮತ್ತು ಕತ್ತಲ ಹಾಡು ಕಾರ್ಯಕ್ರಮವನ್ನು ಪಕ್ಕಲಡ್ಕ ಪ್ರದೇಶದಲ್ಲಿ ಆಚರಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮುಹಿಯ್ಯುದ್ದಿನ್ ಜುಮ್ಮಾ ಮಸೀದಿ ಪಕ್ಕಲಡ್ಕ ಇದರ ಜಮಾಅತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ಕಲಾವಿದ ನಾದಾಮಣಿನಾಲ್ಕೂರು ಅವರಿಂದ ಕತ್ತಲ ಹಾಡು, ಸೌಹಾರ್ದ ಗೀತೆಗಳ ಮೂಲಕ ಹಣತೆ ಹಚ್ಚಿ ಮನದ ಕತ್ತಲೆ ದೂರ ಮಾಡುವ ಗಾನ ಲಹರಿ ಪ್ರಸ್ತುತ ಪಡಿಸಿದರು.

kathala hadu

ಈ ಸಂದರ್ಭದಲ್ಲಿ ಸತ್ಯ ನಾರಾಯಣ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ ಲೊಕೇಶ್ ಎಂ, ಡಿವೈಎಫ್‌ಐ ಪಕ್ಕಲಡ್ಕ ಘಟಕದ ಅಧ್ಯಕ್ಷರಾದ ಜಗದೀಶ್ ಕುಲಾಲ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.