HomeFresh Newsಮಂಗಳೂರು : ದ.ಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ...

ಮಂಗಳೂರು : ದ.ಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರವಿರಾಜ ಹೆಗ್ಡೆ ಕೊಡವೂರು, ಉಪಾಧ್ಯಕ್ಷರಾಗಿ ಉದಯ್ ಎಸ್. ಕೋಟ್ಯಾನ್ ಅವಿರೋಧ ಆಯ್ಕೆ

ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ರಿಟರ್ನಿಂಗ್ ಅಧಿಕಾರಿಯಾದ ರಾಜು ಬಿ. ಇವರು ಚುನಾವಣೆ ಪ್ರಕ್ರಿಯೆ ನಡೆಸಿರುತ್ತಾರೆ. ಶ್ರೀ. ರವಿರಾಜ ಹೆಗ್ಡೆ ಕೊಡವೂರು ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹಾಗೂ ಶ್ರೀ ಉದಯ್ ಎಸ್. ಕೋಟ್ಯಾನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.


ಶ್ರೀ ರವಿರಾಜ ಹೆಗ್ಡೆಯವರು 2009-2014, 2014-2019 ಹಾಗೂ 2019-2022 ಅವಧಿಯಲ್ಲಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾಗಿ, ಕೆ.ಎಂ.ಎಫ್.ನ ಆಡಳಿತ ಮಂಡಳಿ ಮಾಜಿ ನಿರ್ದೇಶಕರಾಗಿ ಹಾಗೂ ವಿವಿಧ ಸಹಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪಡೆದಿರುತ್ತಾರೆ.
ಶ್ರೀ ಉದಯ್ ಎಸ್. ಕೋಟ್ಯಾನ್ ಇವರು ತಾಲೂಕು ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಮಿಯ್ಯಾರು ಹಾಗೂ ಬಜಗೋಳಿ ಜಿ.ಪಂ. ಮಾಜಿ ಸದಸ್ಯರಾಗಿ, ದ.ಕ. ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾಗಿ ಹಾಗೂ ಸಾಣೂರು ವ್ಯವಸಾಯ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆಯನ್ನು ನೀಡಿರುತ್ತಾರೆ.


ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರುಗಳಾದ ಶ್ರೀ. ಕೆ,ಪಿ. ಸುಚರಿತ ಶೆಟ್ಟಿ, ಶ್ರೀ ಎಸ್. ಬಿ. ಜಯರಾಮರೈ, ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀ. ಎನ್. ಮಂಜಯ್ಯ ಶೆಟ್ಟಿ, ಶ್ರೀ ಬಿ. ಸುಧಾಕರ ರೈ, ಶ್ರೀಮತಿ ಸವಿತಾ ಎನ್. ಶೆಟ್ಟಿ, ಶ್ರೀ ಸುಧಾಕರ ಶೆಟ್ಟಿ, ಶ್ರೀ ಕೆ. ಚಂದ್ರಶೇಖರ್ ರಾವ್, ಶ್ರೀ ಕೆ. ಶಿವಮೂರ್ತಿ, ಶ್ರೀ ದೇವಿಪ್ರಸಾದ್ ಶೆಟ್ಟಿ, ಶ್ರೀ ನಂದರಾಮ್ ರೈ, ಶ್ರೀಮತಿ ಮಮತಾ ಆರ್. ಶೆಟ್ಟಿ, ಶ್ರೀ ಹೆಚ್. ಪ್ರಭಾಕರ, ಶ್ರೀ ಭರತ್ ಎನ್. ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿವೇಕ್ ಡಿ. ಹಾಜರಿದ್ದರು.

add - Rai's spices
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments