ಮಂಜೇಶ್ವರ: ಕುಖ್ಯಾತ ಕಳ್ಳರ ತಂಡದ ಸೆರೆ: ಠಾಣಾಧಿಕಾರಿ ಇ ಅನೂಪ್ ನೇತೃತ್ವದಲ್ಲಿ ಕಾರ್ಯಾಚರಣೆ
ಮಂಜೇಶ್ವರ : ಮಂಜೇಶ್ವರ ಠಾಣಾಧಿಕಾರಿ ಇ ಅನೂಪ್ ರವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾನುವಾರ ಮುಂಜಾನೆ ಮಜೀರ್ಪಳ್ಳದಲ್ಲಿ ಕುಖ್ಯಾತ ಕಳ್ಳರ ತಂಡವೊಂದನ್ನು ಸೆರೆ ಹಿಡಿಯಲಾಗಿದೆ.
ಪೆಟ್ರೋಲಿಂಗ್ ನಡೆಸುತ್ತಿರುವ ಮಧ್ಯೆ ಕಾರೊಂದನ್ನು ತಡೆದು ತಪಾಸಣೆ ನಡೆಸುತ್ತಿರುವ ಮಧ್ಯೆ ಕಳ್ಳರ ತಂಡ ಸೆರೆಯಾಗಿದೆ.ಉಳ್ಳಾಲದ ಫೈಸಲ್, ತುಮಕೂರಿನ ಸಯ್ಯದ್ ಅಮಾನ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಇವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪರಾರಿಯಾದವರಿಗೆ ಶೋಧ ಕಾರ್ಯ ಆರಂಭಿಸಲಾಗಿದೆ.
ಕಾರಿನಿಂದ ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಕಟ್ಟರ್ ಸೇರಿದಂತೆ ಹಲವು ರೀತಿಯ ಮಾರಕಾಯುಧಗಳನ್ನು ವಶಕ್ಕೆ ತೆಗೆಯಲಾಗಿದೆ. ಕಾಸರಗೋಡಿಗೆ ಕುಖ್ಯಾತ ಕಳ್ಳರ ತಂಡವೊಂದು ಲಗ್ಗೆ ಹಾಕುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಮೊದಲೇ ಲಭಿಸಿತ್ತು. ಇದರಂತೆ ಠಾಣಾಧಿಕಾರಿ ಇ ಅನೂಪ್ ರವರ ನೇತೃತ್ವದಲ್ಲಿ ಗಡಿ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತಿತ್ತು.
ತಂಡವನ್ನು ಸೆರೆ ಹಿಡಿಯಲು ಊರವರ ಸಹಾಯ ಕೂಡಾ ಪೊಲೀಸರಿಗೆ ಲಭಿಸಿತ್ತು. ಸೆರೆಗೀಡಾದವರನ್ನು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.