ಮಂಜೇಶ್ವರದ ಮಿಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟ್ಟತ್ತಮೊಗರುವಿನಲ್ಲಿ ಮೊಗೇರ ದೈವದ ಪವಾಡ ಕಂಡು ಅಲ್ಲಿನ ಜನತೆ ಅಚ್ಚರಿಗೆ ಒಳಗಾಗಿದ್ದಾರೆ. ಮೊಗೇರ ದೈವಗಳ ವರ್ಷಾವಧಿ ನೇಮೋತ್ಸವ ನಡೆಯುತ್ತದೆ. ಈ ಬಾರಿ ದೈವಗಳ ಭಂಡಾರವನ್ನು ಈ ವರ್ಷದ ಉತ್ಸವಕ್ಕೆಂದು ತೆಗೆದಿಡುವಾಗ, ಕಳೆದ ವರ್ಷ ದೈವದ ಭಂಡಾರಕ್ಕೆ ಅರ್ಪಿಸಿದ ಮಲ್ಲಿಗೆ ಹೂ ವರ್ಷ ಕಳೆದರೂ ಇಂದಿಗೂ ಬಾಡದೆ ಹಾಗೆ ಇರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದು ದೈವದ ಕಾರಣಿಕ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
ಮಂಜೇಶ್ವರದ ಪಟ್ಟತ್ತಮೊಗರುವಿನಲ್ಲಿ ಮೊಗೇರ ದೈವದ ಪವಾಡ
RELATED ARTICLES
