ಮಂಜೇಶ್ವರದಲ್ಲಿ ಸರ್ವೀಸ್ ರೋಡ್, ಅಂಡರ್ ಪಾಸ್ ವ್ಯವಸ್ಥೆ : ಪ್ರಮುಖ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಎನ್.ಹೆಚ್. 66 ಅಭಿವೃದ್ಧಿಯ ಭಾಗವಾಗಿ ಹಲವೆಡೆ ಅಂಡರ್ ಪಾಸ್, ಸರ್ವಿಸ್ ರೋಡ್‍ನ ವ್ಯವಸ್ಥೆ ನೀಡಲಾಗಿದ್ದರೂ ಕೇರಳದ ಅತಿ ದೊಡ್ಡ ಎರಡನೇ ಚೆಕ್-ಪೋಸ್ಟ್ ಮಂಜೇಶ್ವರಕ್ಕೆ ಸರ್ವಿಸ್ ರೋಡ್ ಆಗಲಿ, ಅಂಡರ್ ಪಾಸ್ ಆಗಲಿ ಯಾವುದನ್ನು ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆಗೆ ಸಿದ್ದತೆ ನಡೆಸುತಿದ್ದಾರೆ.

ಇದರ ಮೊದಲ ಹಂತವಾಗಿ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಊರವರು ಗುರುನರಸಿಂಹ ಮಂಟಪದಲ್ಲಿ ಸಭೆ ಸೇರಿ ಬೇಡಿಕೆಯನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಫಾರೂಕ್ ಚೆಕ್-ಪೋಸ್ಟ್ , ಶೇಷಪ್ಪ ಸಾಲಿಯಾನ್ ಮೊದಲಾದವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಜೇಶ್ವರ ಶಾಸಕರು ಊರವರ ಬೇಡಿಕೆ ಈಡೇರುವ ತನಕದ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು.

ಬಳಿಕ ಶಾಸಕರ ನೇತೃತ್ವದಲ್ಲೇ ಆಕ್ಷನ್ ಕಮಿಟಿ ರೂಪಿಸಲಾಯಿತು. ಇರ್ಷಾದ್, ಶೋಭಿತ್, ನವೀನ, ಮೂಸಹಾಜಿ, ಜಯಂತ, ಹಾರಿಸ್ ಡ್ರೆಸ್ ಲ್ಯಾಂಡ್, ಆದರ್ಶ,ರಿತೇಶ್, ರಾಜೇಂದ್ರ, ತಂವೀರ್, ಅಲ್ತಾಫ್, ಹೃತಿಕ್, ಸಂತೋಷ್ ಮೊದಲಾದವರು ನೇತೃತ್ವ ನೀಡಿದರು.

Related Posts

Leave a Reply

Your email address will not be published.