ಮಂಜೇಶ್ವರದೆಲ್ಲೆಡೆ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ
ಮಂಜೇಶ್ವರ: ಪವಿತ್ರ ರಂಜಾನಿನ 30 ವೃತ್ತಗಳನ್ನು ಆಚರಿಸಿ ಮಂಜೇಶ್ವರದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಅತ್ಯಂತ ಸಡಗರ ಸಂಭ್ರಮದ ಈದುಲ್ ಫಿತ್ರ್ ಆಚರಿಸಿದರು. ಮಂಜೇಶ್ವರದ ವಿವಿಧ ಮಸೀದಿ, ಈದ್ಗಾ ಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಷಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಬೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತರಲಾಯ್ತು. ತೂಮಿನಾಡು ಮಸ್ಜಿದ್ ನೂರ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಅಶ್ಪಾಕ್ ಮಚ್ಚಂಪ್ಪಾಡಿ ಹಾಗೂ ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿಯ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಗೆ ಮೊಹಮ್ಮದ್ ಅಲಿ ಸಲಫಿ ನೇತೃತ್ವ ನೀಡಿ ಈದ್ ಸಂದೇಶ ನೀಡಿದರು. ಅದೇ ರೀತಿ ಉದ್ಯಾವರ ಸಾವಿರ ಜಮಾಹತ್, ಕುಂಜತ್ತೂರು, ಜಮಾಹತ್, ಪೆÇಸೋಟು ಜಮಾಹತ್, ಪಾಂಡ್ಯಾಲ್ ಜಮಾಹತ್ ಮೊದಲಾದೆಡೆ ಕೂಡಾ ಈದ್ ಪ್ರಾರ್ಥನೆಗಳು ನಡೆಯಿತು.