ಮಣ್ಣ್ ದ ರುಣೊ ತುಲು ಕವನಸಂಕಲನ ಲೋಕಾರ್ಪಣೆ

ಶ್ರೀ ಧಾಮ ಮಾಣಿಲದಲ್ಲಿ ಶ್ರೀಮತಿ ನಿರ್ಮಲಾ ಶೇಷಪ್ಪ ಕುಲಾಲರ ಮಣ್ಣ್ ದ ರುಣೊ ಎಂಬ ತುಲು ಕವನ ಸಂಕಲನವನ್ನು ಮಾಣಿಲ ಕ್ಷೇತ್ರದ ಶ್ರೀ ಶ್ರೀ,ಯೋಗಿಕೌಸ್ತುಭ, ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯಹಸ್ತದಿಂದ ಲೋಕಾರ್ಪಣೆ ಗೊಂಡಿತು.ಪ್ರಸಿದ್ಧ ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಕೃತಿ ಪರಿಚಯ ಮಾಡಿದರು,ಆಕಾಶವಾಣಿ ನಿರೂಪಕರಾದ ಪ್ರವೀಣ್ ಅಮ್ಮೆಂಬಳ ಹಾಗೂ ಶ್ರೀಯುತ ಸೀತರಾಮ ಒಳಮೊಗರು,ಅಧ್ಯಕ್ಷರು ಕುಲಾಲ ಸಮಾಜ ಎಣ್ಮಕಜೆ ಪಂಚಾಯತ್ ಸಮಿತಿ,ಹಿರಿಯ ಸಾಹಿತಿ ಬಿ.ವಿ ಕುಲಮರ್ವ ಹಾಗೂ ಇತರ ಗಣ್ಯರು ಶುಭಾಶಂಸನೆ ಗೈದರು ,ನಂತರ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ರವರ ಅಧ್ಯಕ್ಷತೆ ಯಲ್ಲಿ ಕವಿಗೋಷ್ಠಿ ನಡೆಯಿತು.

ಶ್ರೀ ವೆಂಕಟ ಭಟ್ ಎಡನೀರು,ಗುಣಾಜೆ ರಾಮಚಂದ್ರ ಭಟ್,ಕುಶಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ, ಪ್ರಮೀಳಾ ಚುಳ್ಳಿಕಾನ,ಉಮೇಶ್ ಶಿರಿಯಾ,ನಾರಾಯಣ ನಾಯ್ಕ ಕುದುಕೋಳಿ, ಹಿತೇಶ್ ಕುಮಾರ್ ನೀರ್ಚಾಲು,ಪ್ರೇಮಾ ಕಣ್ವತೀರ್ಥ ಇವರಿಂದ ಕವನ ವಾಚನ ನಡೆಯಿತು.ವಸಂತ ಬಾರಡ್ಕ ತಂಡದವರಿಂದ ಭಕ್ತಿ ಗಾಯನ ನಡೆಯಿತು ,ಕಾರ್ಯಕ್ರಮ ದ ಮೊದಲಿಗೆ ಶ್ವೇತಾ ಖಂಡಿಗೆಯವರು ಪ್ರಾರ್ಥನೆ ಗೈದು,ಶ್ರೀಮತಿ ವನಜಾಕ್ಷಿ ಚಂಬ್ರಕಾನ ಸ್ವಾಗತಿಸಿದರು ,ಲೇಖಕಿ ಶ್ರೀಮತಿ ನಿರ್ಮಲಾ ಶೇಷಪ್ಪ ಕುಲಾಲರು ಬರವಣಿಗೆಯ ಹಾದಿಯಲ್ಲಿ ತಮ್ಮ ಅನುಭವ ಹಾಗೂ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು,ಸುಂದರ ಬಾರಡ್ಕ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮ ವನ್ನು ಜಯರಾಜ್ ಮಣಿಯಂಪಾರೆ ನಿರ್ವಹಿಸಿದರು ,ಶ್ರೀಯುತ ಶೇಸಪ್ಪ ಕುಲಾಲರು ಸಹಕರಿಸಿದರು

Related Posts

Leave a Reply

Your email address will not be published.