HomeFresh Newsಬೆಳ್ತಂಗಡಿ: ಮೇಲಂತಬೆಟ್ಟು ಬೈಕ್ ಮುಖಾಮುಖಿ ಢಿಕ್ಕಿ: ನಾಲ್ವರು ಗಂಭೀರ..!

ಬೆಳ್ತಂಗಡಿ: ಮೇಲಂತಬೆಟ್ಟು ಬೈಕ್ ಮುಖಾಮುಖಿ ಢಿಕ್ಕಿ: ನಾಲ್ವರು ಗಂಭೀರ..!

ಬೆಳ್ತಂಗಡಿ: ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಬೈಕ್‍ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಬೆಳ್ತಂಗಡಿ ಪೇಟೆಯಿಂದ ಸವಣಾಲು ಕಡೆಗೆ ತೆರಳುತಿದ್ದ ಬೈಕ್ ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‍ಗಳ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಒಂದು ಬೈಕ್‍ನಲ್ಲಿದ್ದ 2.5 ವರ್ಷದ ಮಗು, ಮಹಿಳೆ ಹಾಗೂ ಬೈಕ್ ಸವಾರ ಮತ್ತು ಇನ್ನೊರ್ವ ಬೈಕ್ ಸವಾರ ಸೇರಿ ನಾಲ್ವರಿಗೂ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments