ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ವಿ.ಎಮ್.ಎಸ್ ಆ್ಯಪ್ ಅಳವಡಿಕೆ : ಸ್ಪೀಕರ್ ಯು.ಟಿ. ಖಾದರ್ ಅವರಿಂದ ಉದ್ಘಾಟನೆ
ತಲಪಾಡಿಯಲ್ಲಿರುವ ಸೂರಜ್ ಕಾಲೇಜು ಮತ್ತು ಜ್ಞಾನ ದೀಪ ಶಾಲೆ ಮುಡಿಪು ವತಿಯಿಂದ ಶಾಲೆಯಲ್ಲಿ ಮಕ್ಕಳ ಚಲನವಲನಗಳ ನಿಗಾವಹಿಸುವ ವಿ.ಎಮ್.ಎಸ್ ಆ್ಯಪ್ ಅಳವಡಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ಅವರು ವಿ.ಎಮ್.ಎಸ್ ಆ್ಯಪ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಜುನಾಥ್ ರೇವಣ್ಕರ್ ಅವರು ಸೂರಜ್ ಸಿಕ್ಷಣ ಸಂಸ್ಥೆಯ ಮೂಲಕ ಗ್ರಾಮೀಣ ಮಟ್ಟದ ಮಕ್ಕಳಿಗೆ ಅತ್ತ್ಯುತ್ತಮ ಶಿಕ್ಷಣ ನೀಡುತ್ತಿದ್ದಾರೆ, ಇದು ಅವರದೇಶ ಪ್ರೇಮವಾಗಿದೆ, ಮಕ್ಕಳ ಹಿತದೃಷ್ಟಿಗಾಗಿ ಈ ಆ್ಯಪ್ ಅಳವಡಿಕೆ ಮಾಡಿದ್ದು ಶ್ಲಾಘನೀಯ, ಆದ್ದರಿಂದ ತಾವೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ದೇಶದ ಸಂಪತ್ತಾಗಬೇಕು ಎಂದರು.
ಸೂರಜ್ ಶಿಕ್ಷಣ ಸಂಸ್ಥೆಯ ಚೇರ್ ಮೆನ್ ಮಂಜುನಾಥ್ ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಮನೆಯಿಂದ ಹೊರಡಿ ಶಾಲೆಗೆ ಬರದ ಮಕ್ಕಳು ಸಮಾಜದಲ್ಲಿ ಬಹಳಷ್ಟಿದೆ, ಆದರೆ ಈ ಆಪ್‍ನಲ್ಲಿ ಸ್ಕ್ಯಾನ್ ಮಾಡಿದ ಕೂಡಲೇ ಮಕ್ಕಳ ಹೆತ್ತವರಿಗೆ ಮಕ್ಕಳ ಚಲನವಲನಗಳು ತಿಳಿಯುತ್ತದೆ. ಇದರಿಂದ ಪೆÇೀಷಕರಿಗೆ ಬಹಳ ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ವಿ.ಎ.ಮ್.ಎಸ್ ಆ್ಯಪ್ ಮೆನೇಜರ್ ರೂಪೇಶ್ ದೋಶಿ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ಶ್ರೀಮತಿ ಶೋಬಿತ ವಿ.ಎಮ್.ಎಸ್ ಆ್ಯಪ್ ಬಗ್ಗೆ ಮಾಹಿತಿ ನೀಡಿದರು.
ವಿಎಮ್.ಎಸ್ ಆ್ಯಪ್‍ನ ಮೆನೇಜರ್ ರೂಪೇಶ್ ದೋಶಿ, ಸೂರಜ್ ಶಿಕ್ಷಣ ಸಂಸ್ಥೆಯ ಡೈರೆಕ್ಟರ್
ಡಾ. ಸೂರಜ್ ಎಸ್ ರೇವಣ್ಕರ್, ಪ್ರಾಂಶುಪಾಲರಾದ ಡಾಲ್ಫಿ ಸಿಕ್ವೇರಾ, ಉಪ ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ ಉಪಸ್ಥಿತರಿದ್ದರು.
ಶಿಕ್ಷಕಿ ಶ್ವೇತಾ ಮತ್ತು ಭವ್ಯ ಜ್ಯೋತಿ ಕಾರ್ಯಕ್ರಮ ನಿರೂಪಿದರು, ಉಪ ಪ್ರಾಂಶುಪಾಲ ರಕ್ಷಿತ್ ಕುಲಾಲ್ ಸ್ವಾಗತಿಸಿದರು, ಶಿಕ್ಷಕಿ ರೋಶನಿ ಯು.ಟಿ.ಖಾದರ್ ಅವರ ಅಭಿನಂದನಾ ಪತ್ರ ವಾಚಿದರು.
ಶಿಕ್ಷಕಿ ಸವಿನಾ ಡಿಸೋಜ ವಂದಿಸಿದರು.