HomeFresh Newsಮಿಜಾರು : ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರಿಗೆ ಗಾಯ

ಮಿಜಾರು : ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರಿಗೆ ಗಾಯ

ಮೂಡುಬಿದಿರೆ : ಮಿಜಾರಿನ ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಮೂವರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಆಳ್ವಾಸ್ ಕಾಲೇಜಿನಲ್ಲಿ ವಾಚ್ ಮೆನ್ ಆಗಿರುವ ಶಿವರಾಮ ( 31) ಆತನ ಪತ್ನಿ ಗಂಗಾ (25) ಹಾಗೂ ಪುತ್ರ ಆದರ್ಶ್ (6 ) ಗಾಯಗೊಂಡರು.
ಶಿವರಾಮ ಅವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿವೆ.

ಗ್ಯಾಸ್ ಸೋರಿಕೆಯಾಗಿರುವ ಬಗ್ಗೆ ಗಮನಕ್ಕೆ ಬಾರದೆ ಇರುವುದರಿಂದ ಬೆಂಕಿ ಹಚ್ಚಿದ್ದಾಗ ಸ್ಟೌವ್ ಗೆ ಬೆಂಕಿ ಹತ್ತಿಕೊಂಡು ಘಟನೆ ನಡೆದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments