ಮೂಡುಬಿದಿರೆಯಲ್ಲಿ : ಜಾನುವಾರು ಅಕ್ರಮ ಸಾಗಾಟ
ಮೂಡುಬಿದಿರೆ: ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನಗಳನ್ನು ಮತ್ತು ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ವಿದ್ಯಾಗಿರಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ದನ ಸಾಗಾಟ ವನ್ನು ತಡೆದಿದ್ದಾರೆ. ತೋಡಾರಿನ ಅದ್ದಕ್ಕ ಎಂಬವರಿಗೆ ದನಗಳನ್ನು ನೀಡಲು ಕೊಂಡೋಯ್ಯಲಾಗುತ್ತಿತ್ತೆಂದು ಹೇಳಲಾಗಿದೆ.