ರಸ್ತೆ ಅಪಘಾತಕ್ಕೆ ಯುವಕ ಬಲಿ

ಮೂಡುಬಿದಿರೆ: ಮರಣ ಹೊಂದಿದ್ದ ಅಜ್ಜಿಯ ಕಾರ್ಯವನ್ನು ಮುಗಿಸಿ ಬರುತ್ತಿದ್ದ ಸಂದರ್ಭದಲ್ಲಿ ಮೊಮ್ಮಗ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಮೂಡುಬಿದಿರೆ ತಾಲೂಕಿನ ಕಾಂತವಾರ ಕ್ರಾಸ್ ಬಳಿ ನಿನ್ನೆ ತಡರಾತ್ರಿ ನಡೆದಿದೆ.ಮೂಲತ: ಚಿಕ್ಕಮಂಗಳೂರಿನವರಾಗಿದ್ದು ಇದೀಗ ಮಹಾವೀರ ಕಾಲೇಜು ಬಳಿಯ ರಾಣಿಕೇರಿ ನಿವಾಸಿಯಾಗಿರುವ ರಾಜೇಶ್ (28ವ) ರಸ್ತೆ ಅಪಘಾತಕ್ಕೆ ಬಲಿಯಾದ ವ್ಯಕ್ತಿ.
ರಾಜೇಶ್ ಅವರ ಅಜ್ಜಿ ಬಾಳೆ ಹೊನ್ನೂರಿನಲ್ಲಿ ನಿನ್ನೆ (ಭಾನುವಾರ) ಬೆಳಿಗ್ಗೆ ಮರಣ ಹೊಂದಿದ್ದು ಅವರನ್ನು ನೋಡಲು ಮೂಡುಬಿದಿರೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಹೋಗಿದ್ದರು. ಅಲ್ಲಿ ಅಜ್ಜಿಯ ಕಾರ್ಯಗಳನ್ನು ಮುಗಿಸಿ ಬರುತ್ತಿದ್ದಾಗ ತಡರಾತ್ರಿ ವೇಳೆಗೆ ರಸ್ತೆಯಲ್ಲಿ ಬರುತ್ತಿದ್ದಾಗ ಕಾಂತವಾರ ಕ್ರಾಸ್ ಬಳಿ ದ್ವಿಚಕ್ರ ವಾಹನ ಕಂಟ್ರೋಲ್ ಸಿಗದೆ ಅಪಘಾತ ಸಂಭವಿಸಿದ ಪರಿಣಾಮ ರಾಜೇಶ್ ರಸ್ತೆಯ ಬದಿಗೆ ಎಸೆಯಲ್ಪಟ್ಟಿದ್ದಾರೆ ಯಾರ ಗಮನಕ್ಕೂ ಬಾರದ ಹಿನ್ನೆಯಲ್ಲಿ ಅಧಿಕ ರಕ್ತಶ್ರಾವವಾಗಿ ಜೀವ ಹೋಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ರಾಜೇಶ್ ಅವರಿಗೆ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದು 5 ತಿಂಗಳ ಮಗುವಿದೆ ಎನ್ನಲಾಗಿದೆ.