ಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮನವಿ
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮೂಡುಬಿದಿರೆಯ ರಿಂಗ್ ರೋಡ್ ಪ್ರೀತಮ್ ಗಾರ್ಡನ್ ಬಳಿ, ಅಥವಾ ರಿಂಗ್ ರೋಡ್ ಒಂಟಿಕಟ್ಟೆ/ಅಲಂಗಾರ್ ಜಂಕ್ಷನ್ ನಲ್ಲಿ ಅವಕಾಶ ಮಾಡಿಕೊಡಬೇಕೆಂದು ಮೂಡುಬಿದಿರೆ ತಾಲೂಕು ಹಿಂದು ಜಾಗರಣಾ ವೇದಿಕೆಯು ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ, ತಾಲೂಕು ಸಂಯೋಜಕ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ,ತಾಲೂಕು ಪ್ರಮುಖರಾದ ನರೇಶ್ ಶೆಟ್ಟಿ, ಶುಭಕರ ಶೆಟ್ಟಿ,ನಗರ ಸಂಯೋಜಕರಾದ ನಾಗೇಂದ್ರ ಭಂಡಾರಿ,ಸಹ ಸಂಯೋಜಕ್ ಶರತ್ ಮಿಜಾರ್ ಪುರಸಭಾ ಸದಸ್ಯರಾದ ನಾಗರಾಜ್ ಪೂಜಾರಿ,ಲಕ್ಷ್ಮಣ ಪೂಜಾರಿ,ಅಜಿತ್ ಕುಮಾರ್,ಸದಾನಂದ ಶೆಟ್ಟಿ, ಜಗದೀಶ್,ಪ್ರವೀಣ್ ಕುಮಾರ್,ನಿತಿನ್ ಬನ್ನಡ್ಕ,ಸಂದೀಪ್ ಪೂಜಾರಿ ಬನ್ನಡ್ಕ ಉಪಸ್ಥಿತರಿದ್ದರು..