ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಆಚರಣೆ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮ, ಸಡಗರಿಂದ ಆಚರಿಸಲಾಯಿತು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಗೌತಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಮ್.ಎಸ್. ಡಿಎಸ್‍ಎಮ್ ಕಿಶನ್ ಕುಮಾರ್, ಲಯನ್ 317 ಡಿ ಡಿಸ್ಟ್ರಿಕ್ ಸತೀಶನ್ ಡಿ, ಯುಎಸ್‍ಎಯ ಟೆಥರ್ಪಿಯ ಚೀಪ್ ಪ್ರೊಡಕ್ಟಿವಿಟಿ ಅಫೀಸರ್ ಮ್ಯಾಥ್ಯೂ ಟೇಲರ್ ಸಲಹಾ ಸಮಿತಿಯ ಜ್ಯೋತಿಕಾ ಆಳ್ವಾ ಅವರು ಸಾನಿಧ್ಯ ಸಂಸ್ಥೆಗೆ ಭೇಟಿ ನೀಡಿ ಓಣಂ ಹಬ್ಬದ ಸಂಭ್ರಮದಲ್ಲಿ ತೊಡಗಿದರು. ಪೂಕಳಂ ರಚಿಸಿ ಹಬ್ಬದ ವಾತಾವರಣಕ್ಕೆ ಇನ್ನಷ್ಟು ಇನ್ನಷ್ಟು ಮೆರಗಿ ನೀಡಿದರು. ಈ ಸಂದರ್ಭ ಸಾನಿಧ್ಯ ವಸತಿಯುತ ಶಾಲೆಯ ಡಾ. ವಸಂತ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ ಮೊದಲಾವರು ಉಪಸ್ಥಿತರಿದ್ದರು