ಮೂಡಬಿದಿರೆ ವಿಧಾನಸಭಾ ಕ್ಷೇತ್ರ – ಉಮಾನಾಥ ಕೋಟ್ಯಾನ್ ರೋಡ್ ಶೋ

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮೂಡುಬಿದಿರೆಯ ವಿವಿಧೆಡೆ ರೋಡ್ ಶೋ ನಡೆಸಿ ಗಮನಸೆಳೆದರು. ಉಮಾನಾಥ ಕೋಟ್ಯಾನ್ ಅವರು ನೀರುಡೆ ಚರ್ಚ್ ಬಳಿಯಿಂದ ಮತಯಾಚನೆ ಆರಂಭಿಸಿದರು. ನೀರುಡೆಯಲ್ಲಿ ಕೃಷಿಕರೇ ಹೆಚ್ಚಿದ್ದು ಈ ಭಾಗದಲ್ಲಿ ತೀವ್ರ ನೀರಿನ ಸಮಸ್ಯೆ ಇತ್ತು. ಇಲ್ಲಿ ಹರಿಯುವ ನೀರಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಈ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದು, ಈ ಭಾಗದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಶಾಸಕನಾಗುವ ಅವಕಾಶ ದೊರೆತಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸುವುದಾಗಿ ಉಮಾನಾಥ ಕೋಟ್ಯಾನ್ ಭರವಸೆ ನೀಡಿದರು.

ಪಾಲಡ್ಕ ಗ್ರಾಮದ ವರ್ಣಬೆಟ್ಟುವಿನಲ್ಲಿ ಮತದಾರರ ಸಭೆ ನಡೆಸಿ ತನ್ನ ಅಧಿಕಾರಾವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಬಿಜೆಪಿ ಪಕ್ಷದ ವತಿಯಿಂದ ಇರುವೈಲು, ಶಿಬರೂರು ಮತ್ತು ಸಂಪಿಗೆಯಲ್ಲಿ ರ್ಯಾಲಿ ನಡೆದಿದ್ದು ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಕ್ರೈಸ್ತ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜೊಯಿಲಸ್ ಡಿಸೋಜ, ಕೆ.ಎಂ.ಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ನೀರುಡೆಯ ಬಿಜೆಪಿ ಪ್ರಮುಖರಾದ ಜೊಯಿಸನ್, ಪ್ರತೀಕ್ ಶೆಟ್ಟಿ, ಸಂದೀಪ್ ಶೆಟ್ಟಿ ಮರವೂರ, ಪಾಲಡ್ಕ ಪಂಚಾಯತ್ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಇರುವೈಲು ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಕೆ.ಎಂ.ಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ವಕೀಲರು ಶಾಂತಿ ಪ್ರಸಾದ್ ಹೆಗ್ಡೆ, ಅಶೋಕ್ ಶೆಟ್ಟಿ ತೋಡಾರ್, ಹೈಕೋರ್ಟ್ ವಕೀಲರಾದ ಐ ಚಂದ್ರಹಾಸ್ ಶೆಟ್ಟಿ, ಧನಂಜಯ ಶೆಟ್ಟಿ ದೊಡ್ಡಗುತ್ತು, ಪಂಚಾಯತ್ ಸದಸ್ಯರುಗಳು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು
