ಮೂಡುಬಿದಿರೆ: ಭಾಷೆ, ಪರಂಪರೆಯನ್ನು ತುಳುನಾಡಿನ ಜನತೆ ಮರೆತಿಲ್ಲ: ಅರಗ ಜ್ಞಾನೇಂದ್ರ

ಮೂಡುಬಿದಿರೆ:  ಕಂಬಳವು ಕರಾವಳಿ ಭಾಗದ ಜನರ ಜನಪದ ಕಲೆಯಾಗಿದೆ. ಭಾಗದ ಜನರು ಪ್ರಪಂಚದ ಯಾವ ಮೂಲೆಗೆ ಹೋದರೂ  ಇಲ್ಲಿನ ಭಾಷೆ, ಆಚರಣೆ, ಸಾವಿರಾರು ವರ್ಷಗಳ ಪರಂಪರೆಗಳನ್ನು ತುಳುನಾಡಿನ ಜನತೆ ಮರೆತಿಲ್ಲ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ  ೨೦ ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಶನಿವಾರ ರಾತ್ರಿ ನಡೆದ  ಸಭಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಕರಾವಳಿಯ ಜನರು  ದೈವ-ದೇವರುಗಳನ್ನು  ಆರಾಧಿಸುವುದಕ್ಕಾದರೂ ದೂರದೂರುಗಳಿಂದ ವರ್ಷಕ್ಕೊಮ್ಮೆಯಾದರೂ ಬಂದು ಹಿರಿಯರ ಜತೆ ಸೇರುತ್ತಾರೆ ಎಂದ ಅವರು ಮೂಡುಬಿದಿರೆ ಕಂಬಳದ ಅಚ್ಚುಕಟ್ಟುತನ ಇಷ್ಟವಾಯಿತು ಎಂದರು.

ಶಾಸಕ ಕೋಟ್ಯಾನ್ ಪ್ರಾಸ್ತಾವಿಕ ವಾಹಕ ಮಾತನಾಡಿ ಸ್ವಾಗತಿಸಿದರು.

ಕಂಬಳದಲ್ಲಿ ಸಾಧನೆಗೈದ ಸಾಧಕರಾದ ಪ್ರಗತಿಪರ ಕೃಷಿಕರು, ಹಿರಿಯ ಕಂಬಳ ಕೋಣಗಳ ಯಜಮಾನರು ಇರುವೈಲು ಪಾಣಿಲ ಬಾಡ ಪೂಜಾರಿ ಅವರ (ಮರಣೋತ್ತರ ಗೌರವ ಸನ್ಮಾನ) ಗೌರವ ಸನ್ಮಾನವನ್ನು ಅವರ ಪುತ್ರ ರಮೇಶ್,ಪ್ರಗತಿಪರ ಕೃಷಿಕರು, ಕಂಬಳ ಕೋಣಗಳ ಯಜಮಾನರು ಹಾಗೂ ಹಿರಿಯ ಕಂಬಳ ಓಟಗಾರರಾದ ಸಂಜೀವ ಪೂಜಾರಿ, ಕಂಬಳ ಕೋಣಗಳ ಯಜಮಾನರು ಹಿರಿಯ ದೈವ ನರ್ತಕ ಕಡಂದಲೆ ಮುಡಾಯಿಬೆಟ್ಟು ಕಾಳು ಪಾಣರ, ಕಂಬಳದ ಕೋಣಗಳ ಯಜಮಾನ,ಹಿರಿಯ ಕಂಬಳ ಓಟಗಾರ ವಾಲ್ಪಾಡಿ ಹಾಲಾಜೆ ಲೂಯಿಸ್ ಸಲ್ದಾನ  ಅವರನ್ನು ಈ  ಸಂದರ್ಭದಲ್ಲಿ  ಸನ್ಮಾನಿಸಲಾಯಿತು.

ಚಲನಚಿತ್ರ ನಿರ್ಮಾಪಕರು, ಉದ್ಯಮಿ ಅರುಣ್ ರೈ ತೋಡಾರು ಹಾಗೂ ಮಿಸ್ ಯೂನಿವರ್ಸ್ ಅವರ್ಡ್ ಪಡೆದ ಅರುಣ್ ಭಟ್ ಅವರನ್ನು ಸನ್ಮಾನಿಸಲಾಯಿತು.ಅದಾನಿ ಗ್ರೂಫ್ ಕಿಶೋರ್ ಆಳ್ವ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜಿಲ್ಲಾಧಿಕಾರಿ ಎಂ.ರವಿ ಕುಮಾರ್,  ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ,ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಮಂಡಲಾಧ್ಯಕ್ಷ ಸುನೀಲ್ ಆಳ್ವ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್,  ಕಂಬಳ ಸಮಿತಿಯ ಕಾರ್ಯದರ್ಶಿ ಗುಣಪಾಲ ಕಡಂಬ, ಬಿಜೆಪಿಯ ಜಗದೀಶ್ ಅಧಿಕಾರಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ವಕೀಲ ಸುರೇಶ್ ಕೆ.ಪೂಜಾರಿ,  ಮೂಡದ ಮಾಜಿ ಅಧ್ಯಕ್ಷ ಮೇಘನಾಥ್ ಶೆಟ್ಟಿ,  ಕಂಬಳ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸಂದರ್ಭದಲ್ಲಿದ್ದರು. 

Related Posts

Leave a Reply

Your email address will not be published.