ಮೂಡುಬಿದರೆ: ಮನೆಗೆ ನುಗ್ಗಿ ಮಹಿಳೆಗೆ ತಲವಾರು ಝಳಪಿಸಿ ಕರಿಮಣಿ ಸರ ದರೋಡೆ
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಬೇರಿಂಜೆಯ ಮನೆಯೊಂದಕ್ಕೆ ಮುಸುಕುಧಾರಿ ವ್ಯಕ್ತಿಗಳಬ್ಬರು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ದುಡಿಯುತ್ತಿರುವ ಕಮಲ ಶೆಟ್ಟಿ ದರೋಡೆಗೊಳಗಾದ ಮಹಿಳೆ ಇವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದು, ಪತಿ ಕಳೆದ ವರ್ಷ ನಿಧನ ಹೊಂದಿದ್ದರು. ಮನೆಯಲ್ಲಿ ಒಂಟಿಯಾಗಿದ್ದುದರಿಂದ ರಾತ್ರಿ ಮಲಗಲು ಪರಿಚಯಸ್ಥ ಮಹಿಳೆಯೊಬ್ಬರು ಇವರ ಮನೆಗೆ ಬರುತ್ತಿದ್ದರು. ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮನೆ ಹೊರಗಡೆ ಮಾತನಾಡುತ್ತಿದ್ದ ಇವರಿಬ್ಬರು ನಂತರ ಮಲಗಲು ಮನೆ ಒಳಗಡೆ ಹೋಗುತಿದ್ದಂತೆ ಮುಸುಕುಧಾರಿಗಳಬ್ಬರು ಮಾರಕಾಯುಧದೊಂದಿಗೆ ಮ ನೆಗೆ ನುಗ್ಗಿ ಕಮಲ ಅವರ ಕತ್ತು ಒತ್ತಿ ಹಿಡಿದು ಕರಿಮಣಿ ಸರವನ್ನು ಎಳೆದೊಯ್ದು ಪರಾರಿಯಾಗಿದ್ದಾರೆ. ಮಹಿಳೆ ಹೊಟ್ಟೆ ಹೊಡೆದಾಗ ಹತ್ತಿರದಲ್ಲಿ ಗಣೇಶೋತ್ಸವ ಸಿದ್ಧತೆಯಲ ಸಿದ್ದ ಯುವಕರು ಸ್ಥಳಕ್ಕೆ ಧಾವಿಸಿ ಬಂದು ಸುತ್ತ ಮುತ್ತ ಹುಡುಕಾಡಿದರೂ ಆರೋಪಿಗಳ ಸುಳಿವು ಸಿಗಲಿಲ್ಲ. ಘಟನೆಯಿಂದ ಆಘಾತಕ್ಕೊಳಗಾದ ಕಮಲ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.