ಮೂಡುಬಿದಿರೆ: ಮಾಜಿ ಸೈನಿಕ ನಿಧನ
ಮೂಡುಬಿದಿರೆ: ಮಾಜಿ ಸೈನಿಕ ಹೆನ್ರಿ ಲೋಬೋ (80) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಮಾಸ್ತಿಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
15 ವರ್ಷಗಳ ಸೈನಿಕನಾಗಿ ಸೇವೆ ಸಲ್ಲಿಸಿದ ಅವರು ನಂತರ 23 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಅವರು ಪತ್ನಿ ಅಲಿಸಾ ಲೋಬೋ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.