ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಗ್ರಂಥಾಲಯ ಸಹಾಯಕಿಯಾಗಿದ್ದ ಹೇಮಲತಾ ನಿಧನ
ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು, ಗ್ರಂಥಾಲಯ ಸಹಾಯಕಿಯಾಗಿದ್ದ ಶ್ರೀಮತಿ ಹೇಮಲತಾ (49) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಸೆ 2ರಂದು ನಿಧನ ಹೊಂದಿದರು. ಅವರು ಪತಿಯನ್ನು ಅಗಲಿದ್ದಾರೆ. ಕಳೆದ 10 ವರ್ಷಗಳಿಂದ ಅವರು ಕಾಲೇಜಿನ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ಮಹಾವೀರ ಕಾಲೇಜು ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.