HomeFresh Newsಮೂಡುಬೆಳ್ಳೆ: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಸಹಸ್ರ ಬಿಲ್ವಾರ್ಚನಾ ಪೂಜ...

ಮೂಡುಬೆಳ್ಳೆ: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಸಹಸ್ರ ಬಿಲ್ವಾರ್ಚನಾ ಪೂಜ ಕಾರ್ಯಕ್ರಮ

ಕಾಪು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್ ಕಾಪು ತಾಲೂಕು ಘಟಕದ ವತಿಯಿಂದ
ಬೆಳ್ಳಿ ಕಟ್ಟಿಂಗೇರಿ ಕಾರ್ಯಕ್ಷೇತ್ರ ನಿರ್ವಹಿಸುವ ವಲಯದ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ
ಸಹಸ್ರ ಬಿಲ್ವಾರ್ಚನೆ, ಪೂಜ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ದಿನಾಂಕ 16/2/2026 ಸೋಮವಾರ ದಂದು ನಡೆಯಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಸಹಸ್ರ ಬಿಲ್ವಾರ್ಚನೆ, ಪೂಜಾ ವಿಧಿವಿಧಾನಗಳು ಹಾಗೂ ಭಜನೆ ಕಾರ್ಯಕ್ರಮವು ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ನಿರಂಜನ್ ರಾವ್ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಭಾಗವಹಿಸಿ ಮಾತನಾಡಿದ ವೇದಮೂರ್ತಿ ಶ್ರೀ ವಿಖ್ಯಾತ್ ಭಟ್ ಅವರು ಮಕ್ಕಳಲ್ಲಿ ಇರಬೇಕಾದ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಹಾಗೂ ದೇವರ ಸ್ಮರಣೆಯಿಂದ ಆಗುವ ಅನುಕೂಲತೆ ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಯ ಪಾತ್ರ ಮುಖ್ಯವಾಗಿದೆ ಅವರು ಅನೇಕ ವಿಷಯಗಳ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡುವ ಮೂಲಕ ಸುಸಂಸ್ಕೃತರಾಗಿ ಬಾಳಿ ಬದುಕಲು ಅನುಭವವನ್ನು ಧಾರೆ ಎರೆಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನ ಅಧಿಕಾರಿಯಾದ ಶ್ರೀಮತಿ ಮಮತಾ ಶೆಟ್ಟಿ ಅವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಕಟ ಪೂರ್ವ ಜನ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ
ಶ್ರೀ ದೇವದಾಸ್ ಹೆಬ್ಬಾರ್ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.


ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯ ಆಚಾರ್ಯ,
ಎರಡು ಒಕ್ಕೂಟಗಳ ಅಧ್ಯಕ್ಷರಾದ ಶ್ರೀಮತಿ ದೀಪ, ಶ್ರೀಮತಿ ಸುಜಾತ ಸುವರ್ಣ ಹಾಗೂ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments