ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಮೂಡುಬಿದಿರೆ : ಹಿಂದೂ ದೇವರುಗಳನ್ನು ಅವಮಾನಿಸಿ ಮಕ್ಕಳನ್ನು ಬಲತ್ಕಾರದ ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ವಿದ್ಯಾಗಿರಿಯಲ್ಲಿ ಬಂಧಿಸಿದ್ದಾರೆ.

ಮೈಸೂರಿನ ನಿವಾಸಿ ಬೆಂಜಮಿನ್ ವಾಸ್ ಎಂಬಾತ ಬಂಧಿಸಲ್ಪಟ್ಟ ವ್ಯಕ್ತಿ. ವಿದ್ಯಾಗಿರಿಯಲ್ಲಿ ನಡೆಯುತ್ತಿದ್ದ ಸ್ಕೌಟ್ಸ್ ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಜನರು ಸೇರುತ್ತಿದ್ದ ಕಡೆಗೆ ಧಾವಿಸುತ್ತಿದ್ದ ಬೆಂಜಮಿನ್, ಹಿಂದುಗಳ ದೇವರಾಗಿರುವ ಶ್ರೀರಾಮನನ್ನು ನೀವು ನಂಬಿದರೆ ನರಕಕ್ಕೆ ಹೋಗುತ್ತೀರಿ ಎಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದನ್ನಲೆ ಅವಮಾನಸಿ ಬಲತ್ಕಾರದ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ . ಈ ಬಗ್ಗೆ ಹಿಂಜಾವೇ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಬೆಂಜಮಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ‌ ವಿರುದ್ಧ ಮತಾಂತರ ಕಾಯ್ದೆಯಡಿ ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಹಿಂಜಾವೇ ಆಗ್ರಹಿಸಿದೆ

Related Posts

Leave a Reply

Your email address will not be published.