HomeFresh Newsರಸ್ತೆ ಸಮತಟ್ಟುಗೊಳಿಸುವ ಯಂತ್ರ ಕೂಲಿ ಕಾರ್ಮಿಕನಿಗೆ ಢಿಕ್ಕಿ, ಸ್ಥಳದಲ್ಲೇ ಮೃತ್ಯು

ರಸ್ತೆ ಸಮತಟ್ಟುಗೊಳಿಸುವ ಯಂತ್ರ ಕೂಲಿ ಕಾರ್ಮಿಕನಿಗೆ ಢಿಕ್ಕಿ, ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ವೇಳೆ ರಸ್ತೆ ಸಮತಟ್ಟುಗೊಳಿಸುವ ಯಂತ್ರ ಕೂಲಿ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಧ್ಯಪ್ರದೇಶದ ವಿವೇಕ್(35)ಎಂದು ಗುರುತಿಸಲಾಗಿದೆ. ಮೂಡುಬಿದಿರೆ-ಕಾರ್ಕಳ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಸೋಮವಾರ ರಸ್ತೆ ಸಮತಟ್ಟುಗೊಳಿಸುವ ಯಂತ್ರ ಹಿಮ್ಮುಖವಾಗಿ ಚಲಿಸುವಾಗ ಹಿಂಬದಿಯಲ್ಲಿ ನಿಂತಿದ್ದ ಕಾರ್ಮಿಕನನ್ನು ಗಮನಿಸದೆ ಆತನ ಮೇಲೆಯೆ ಯಂತ್ರ ಹರಿದು ಕಾರ್ಮಿಕ ಮೃತಪಟ್ಟರೆನ್ನಲಾಗಿದೆ. ಯಂತ್ರದ ಚಾಲಕ ಮಧ್ಯಪ್ರದೇಶದ ರಾಹುಲ್ ವಿರುದ್ಧ ಮೂಡುಬಿದಿರೆ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments