ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ಅಧಿವೇಶನ
ಮುಂಬೈ: ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ,ಇದರ ಮಹಾ ಅಧಿವೇಶನ ಹಾಗೂ ವಿಶ್ವ ಬಂಟರ ಸಮ್ಮಿಲನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಬಂಟರ ಸಮ್ಮೇಳನ ಸೆಪ್ಟೆಂಬರ್ 18 ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ ಭಂಡಾರಿ ಸಭಾಗೃಹದ ಕೂಳೂರು ಕನ್ಯಾನ ಸದಾಶಿವ ಕೆ. ಶೆಟ್ಟಿ ವೇದಿಕೆಯಲ್ಲಿ ನಡೆಯಲಿದ್ದು. ಈ ಬಗ್ಗೆ ಪೂರ್ವ ಸಿದ್ಧತಾ ಸಭೆಯು ಕುರ್ಲಾ ಪೂರ್ವದ ಬಂಟರ ಭವನದ ಸಂಕಿರಣದಲ್ಲಿ ನಡೆಯಿತು.
ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಅಧ್ಯಕ್ಷೀಯ ಮಾತುಗಳನಾಡುತ್ತಾ ಬೆಳಗ್ಗಿನಿಂದ ರಾತ್ರಿವರೆಗೆ ಕಾರ್ಯಕ್ರಮ ನಡೆಯಲಿದ್ದು ಇದು ಬಂಟ ಬಂಧುಗಳನ್ನು ಒಗ್ಗಟ್ಟು ಮತ್ತವರ ಸಂಘಟನಾ ಚತುರ್ಥಿಯನ್ನು ಮೇಲಾಯಿಸುವ ಕಾರ್ಯವಾಗಿದೆ .ಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪಾಲ್ಗೊಳ್ಳುವ ಎಲ್ಲಾ ಸಿದ್ಧತೆಗಳದಿದೆ. ಪೂರ್ತಿ ಕಾರ್ಯಕ್ರಮ ಸಮಯದಲ್ಲಿ ನಡೆಯಬೇಕೆನ್ನುವ ನಮ್ಮ ಸಿದ್ಧತೆ .ದಾನ ನೀಡಿದ ದಾನಿಗಳು ನಮಗೆ ಪ್ರಮುಖರಾಗಿರುತ್ತಾರೆ ಅವರೆಲ್ಲರೂ ಸಮಯದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ನಮಗೆ ವಿಶ್ವಾಸವಿದೆ ಎಂದರು.
ಕಾರ್ಯಕ್ರಮ ಸಮಿತಿಯ ಕಾರ್ಯ ಅಧ್ಯಕ್ಷ ಡಾಕ್ಟರ್ ಆರ್ ಕೆ ಶೆಟ್ಟಿ ಪೂರ್ತಿ ಕಾರ್ಯಕ್ರಮದ ವಿಹಾರವನ್ನು ನೀಡುತ್ತಾ ಬೆಳಿಗ್ಗೆ ಎಂಟು ಗಂಟೆಗೆ ಬಂಟರ ಭವನದ ಆವರಣದಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವರಿಗೆ ಪೂಜೆ ನಡೆದ ಬಳಿಕ ಗುತ್ತಿನ ಮನೆ ಉದ್ಘಾಟನೆ ಮೆರವಣಿಗೆ ವಿವಿಧ ನೃತ್ಯ ಕಾರ್ಯಕ್ರಮಗಳು ಮಧ್ಯಾಹ್ನ ರಾತ್ರಿ ಭೋಜನದ ವ್ಯವಸ್ಥೆ ಹೀಗೆ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಭೆಗೆ ತಿಳಿಸಿದರು ಅದರ ಜವಾಬ್ದಾರಿಯನ್ನು ಪ್ರತಿಯೊಬ್ಬರಿಗೂ ನೀಡಲಾಯಿತು.
ಸಭೆಯಲ್ಲಿ ಬಂಟರ ಸಂಘದ ಜೋಗೇಶ್ವರಿ – ದಹಸರ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ. ಎಮ್ ಜಿ ಶೆಟ್ಟಿ-. ನವಿ ಮುಂಬೈ ಪ್ರಾದೇಶಿಕ ಸಮಿತಿಯ ಕಾರ್ಯ ಧ್ಯಕ್ಷಹರೀಶ್ ಪಡುಬಿದ್ರಿ-. ವಸಾಯಿ ಡಹಾನು ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷ ಹರೀಶ್ ಪಾಂಡು ಶೆಟ್ಟಿ. ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶಿವರಾಮ ಎನ್ ಶೆಟ್ಟಿ, ಅಂದೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷ ರವೀಂದ್ರ ಶೆಟ್ಟಿ. ಕಲ್ಯಾಣ್ ಬದ್ಲಾಪುರ ಬಿವಂಡಿ ಕಾರ್ಯ ಧ್ಯಕ್ಷ ರವೀಂದ್ರ ಶೆಟ್ಟ. ಸುಬ್ಬಯ್ಯ ಶೆಟ್ಟಿ ಹಾಗೂ ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಕೆ ಶೆಟ್ಟಿ, ಅಂಧೇರಿ ಬಾಂದ್ರಾ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಜ್ರಪುಂಜ, ಕುರ್ಲಾ ಬಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷ ಸಂಗೀತಾ ಶೆಟ್ಟಿ, ಬಂಟರ ಸಂಘದ ವಿವಾಹ ನೋಂದಣಿಕೆ ಸಮಿತಿಯ ಕಾರ್ಯಾದ್ಯಕ್ಷೆ ಶಶಿಕಾಂತಿ ಶೆಟ್ಟಿ, ಸಭೆಯಲ್ಲಿ ಬಂಟರ ಸಂಘದ ವಿವಿಧ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಸದಸ್ಯರು ಸಂಘದ ವಿವಿಧ ಉಪಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಒಕ್ಕೂಟದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ, ಒಕ್ಕೂಟದ ಪೆÇೀಷಕ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶೋಕ್ ಪಕ್ಕಳ ನಿರೂಪಿಸಿದರು ಒಕ್ಕೂಟದ ಕೋಶ ಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಧನ್ಯವಾದ ನೀಡಿದರು. ಸುಚಿತ ಕೆ ಶೆಟ್ಟಿ ಪ್ರಾರ್ಥನೆ ನೆರೆವೇರಿಸಿದರು.